ಏಶ್ಯಕಪ್ ಸೂಪರ್-4 ಪಂದ್ಯ: ಪಾಕಿಸ್ತಾನ ವಿರುದ್ಧ ಶ್ರೀಲಂಕಾ ಜಯಭೇರಿ

Update: 2022-09-09 17:31 GMT
Photo : cricbuzz.com

 ದುಬೈ, ಸೆ.9: ಆರಂಭಿಕ ಬ್ಯಾಟರ್ ಪಥುಮ್ ನಿಶಾಂಕ್ (ಔಟಾಗದೆ 55, 48 ಎಸೆತ, 5 ಬೌಂಡರಿ, 1 ಸಿಕ್ಸರ್)ಏಕಾಂಗಿ ಹೋರಾಟದ ನೆರವಿನಿಂದ ಶ್ರೀಲಂಕಾ ತಂಡ ಪಾಕಿಸ್ತಾನ ವಿರುದ್ಧದ ಏಶ್ಯಕಪ್‌ನ ಕೊನೆಯ ಸೂಪರ್-4 ಪಂದ್ಯದಲ್ಲಿ ಐದು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿದೆ. ಇದರೊಂದಿಗೆ ರವಿವಾರ ನಡೆಯಲಿರುವ ಫೈನಲ್ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸಿದೆ. ಲಂಕಾ ತಂಡವು ಫೈನಲ್‌ನಲ್ಲಿ ಪಾಕ್ ತಂಡವನ್ನು ಮತ್ತೊಮ್ಮೆ ಎದುರಿಸಲಿದೆ.

ಗೆಲ್ಲಲು 122 ರನ್ ಗುರಿ ಪಡೆದಿದ್ದ ಲಂಕಾ 17 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಕುಶಾಲ್ ಮೆಂಡಿಸ್(0)ಹಾಗೂ ದನುಷ್ಕ ಗುಣತಿಲಕ(0)ಶೂನ್ಯಕ್ಕೆ ಔಟಾದ ಕಾರಣ ಲಂಕಾ ಕಳಪೆ ಆರಂಭ ಪಡೆದಿತ್ತು. ಧನಂಜಯ ಡಿಸಿಲ್ವಾ(9) ಕೂಡ ಬೇಗನೆ ಔಟಾದರು. ಭಾನುಕ ರಾಜಪಕ್ಸ(24 ರನ್), ನಾಯಕ ದಸುನ್ ಶನಕ(21) ಹಾಗೂ ಹಸರಂಗ(ಔಟಾಗದೆ 10)ತಂಡದ ಗೆಲುವಿಗೆ ಕಾಣಿಕೆ ನೀಡಿದರು.
 ಪಾಕ್ ಪರ ಹಾರಿಸ್ ರವೂಫ್(2-19) ಹಾಗೂ ಮುಹಮ್ಮದ್ ಹಸನೈನ್(2-21)ತಲಾ ಎರಡು ವಿಕೆಟ್ ಪಡೆದಿದ್ದಾರೆ.
  
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕ್ ತಂಡ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಡಿಸಿಲ್ವಾ(3-21)ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ದಾಳಿಗೆ ತತ್ತರಿಸಿ 19.1 ಓವರ್‌ಗಳಲ್ಲಿ ಕೇವಲ 121 ರನ್‌ಗೆ ಆಲೌಟಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News