ಬೆಂಗಳೂರು | ಸಾಲ ತೀರಿಸಲು ದೇವಾಲಯಗಳಿಂದ ಕಳವು: ಆರೋಪಿಯ ಬಂಧನ
Update: 2022-09-10 18:44 IST
ಬೆಂಗಳೂರು, ಸೆ.10: ಸಾಲ ತೀರಿಸಲು ಪೂಜೆ ಮಾಡಿಸುವ ನೆಪದಲ್ಲಿ ದೇವಾಲಯಗಳಿಗೆ ಹೋಗಿ ದೇವಿಯ ಚಿನ್ನದ ತಾಳಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಓರ್ವನನ್ನು ಇಲ್ಲಿನ ಶ್ರೀರಾಂಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಮೂಲದ ಕಲ್ಲೇಶ್ ಬಂಧಿತ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ.
ಮೂಲತಃ ಬೇಸಾಯ ಮಾಡುತ್ತಿದ್ದ ಈತ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲು ನಗರದ ವಿವಿಧ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸುವ ಸೋಗಿನಲ್ಲಿ ಹೋಗಿ ಕಳ್ಳತನ ಮಾಡುತ್ತಿದ್ದ. ಕಳೆದ ತಿಂಗಳು ಶ್ರೀರಾಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ನಿ ಕಾಪರಮೇಶ್ವರಿ ದೇವಾಲಯಕ್ಕೆ ಭಕ್ತನ ಸೋಗಿನಲ್ಲಿ ತೆರಳಿ ಯಾರು ಇಲ್ಲದಿರುವ ಸಮಯ ನೋಡಿ ದೇವಿಯ ಮಾಂಗಲ್ಯ ಕಳವು ಮಾಡಿದ್ದ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಸಿಟಿವಿ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.