×
Ad

ಮಂಗಳೂರು; ಸಾಮಾಜಿಕ ಕಾರ್ಯಕರ್ತೆ ನಾಪತ್ತೆ

Update: 2022-09-10 23:03 IST

ಮಂಗಳೂರು, ಸೆ.10: ನಗರದಲ್ಲಿ ರೋಗಿಗಳಿಗೆ ಸೇವೆ ಸಲ್ಲಿಸುವ ಸಾಮಾಜಿಕ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜೇಶ್ವರಿ (36) ಎಂಬವರು ಸೆ.8ರಿಂದ ಕಾಣೆಯಾದ ಬಗ್ಗೆ ಅವರ ಪತಿ ರಾಜಕುಮಾರ ಎಂಬವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ತಾನು ಜೆಸಿಬಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು. ಪತ್ನಿ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಸೆ.8ರಂದು ರಾತ್ರಿ 7.30ಕ್ಕೆ ನಗರದ ಸ್ಟೇಟ್‌ಬ್ಯಾಂಕ್ ಹತ್ತಿರದ ಮೀನು ಮಾರ್ಕೆಟ್‌ಗೆ ಹೆಂಡತಿ ಜೊತೆ ಹೋಗಿದ್ದೆ. ಮಕ್ಕಳಿಗೆ ತಿಂಡಿ ತೆಗೆದುಕೊಂಡು ಬರುತ್ತೇನೆಂದು ಹೇಳಿ ಹೋದ ಪತ್ನಿ ಮರಳಿ ಬಂದಿಲ್ಲ. ಸುತ್ತಮುತ್ತ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಮೊಬೈಲ್ ಪೋನನ್ನು ತನ್ನ ಬ್ಯಾಗಿನಲ್ಲಿ ಹಾಕಿ ಹೋಗಿರುತ್ತಾಳೆ. 5 ಅಡಿ ಎತ್ತರದ, ಬಿಳಿ ಮೈಬಣ್ಣದ ರಾಜೇಶ್ವರಿ ಪಿಂಕ್ ಬಣ್ಣದ ಚೂಡಿದಾರ್, ಲೆಗ್ಗಿನ್ಸ್ ಮತ್ತು ಹಳದಿ ಬಣ್ಣದ ಶಾಲ್ ಧರಿಸಿರುತ್ತಾಳೆ. ಕನ್ನಡ, ತುಳು, ಮಲೆಯಾಳಂ, ಹಿಂದಿ ಭಾಷೆ ಮಾತನಾಡುತ್ತಾಳೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ರಾಜಕುಮಾರ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News