ಬುಟ್ಟಿಯೊಳಗಿನ ಹಾವು ಬಿಡ್ತೀವಿ ಎಂದು ಬ್ಲಾಕ್‌ಮೇಲ್ ಮಾಡಿದರೆ ಹೆದರುವವರು ಯಾರು?: ದಿನೇಶ್ ಗುಂಡೂರಾವ್

Update: 2022-09-12 05:15 GMT

ಬೆಂಗಳೂರು, ಸೆ.12: ವಿಧಾನ ಮಂಡಲದ ಅಧಿವೇಶನದಲ್ಲಿ ಸರ್ಕಾರದ ಹಗರಣಗಳ ಬಗ್ಗೆ ನಾವು ಪ್ರಶ್ನೆ ಮಾಡುವ ವಿಚಾರ ಬಿಜೆಪಿಯವರಿಗೆ ಮೈ ಚಳಿ ಹುಟ್ಟಿಸಿದೆ. ಹಾಗಾಗಿ ಅರ್ಕಾವತಿ ರಿ-ಡೂ ಪ್ರಕರಣದ ತನಿಖೆಯ ಬಗ್ಗೆ ಮಾತಾಡುತ್ತಿದ್ದಾರೆ. ಬುಟ್ಟಿಯೊಳಗಿನ ಹಾವು ಬಿಡ್ತೀವಿ ಎಂದು ಹೆದರಿಸುವ ಬದಲು ತನಿಖೆ ನಡೆಸಲಿ. ಸರ್ಕಾರ ಅವರದ್ದೇ ಅಲ್ಲವೇ? ಬ್ಲಾಕ್‌ಮೇಲ್ ಮಾಡಿದರೆ ಹೆದರುವವರು ಯಾರು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಇಂದಿನಿಂದ ವಿಧಾನ ಮಂಡಲದ ಅಧಿವೇಶನ ಪ್ರಾರಂಭವಾಗುತ್ತಿದೆ. ಮೊನ್ನೆಯಷ್ಟೇ ದೊಡ್ಡಬಳ್ಳಾಪುರದಲ್ಲಿ‌ ಖಾಲಿ‌ ಕುರ್ಚಿಗಳ ಎದುರು 'ಜನ ಸ್ಪಂದನ'ಯಾತ್ರೆ ಎಂಬ ಪ್ಲಾಫ್ ಶೋ ನಡೆಸಿರುವ BJPಯವರು ಇಂದು ಸದನದಲ್ಲಿ ಉತ್ತರಿಸಲೇಬೇಕಾದ ಅನೇಕ ಪ್ರಶ್ನೆಗಳಿವೆ. 40 ಶೇ. ಕಮಿಷನ್, ಪಿಎಸ್ಸೈ ಹಗರಣ, ನೆರೆ‌ ನಿರ್ವಹಣೆ ವೈಫಲ್ಯದ ಬಗ್ಗೆ ಸದನದಲ್ಲಿ‌ ಉತ್ತರಿಸಲೇಬೇಕು ಎಂದವರು ಹೇಳಿದ್ದಾರೆ.

ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ಕಡೆ ಮಳೆಯಿಂದಾಗಿ ಜೀವಹಾನಿ ಆಸ್ತಿ ಹಾನಿ ಸಂಭವಿಸಿದೆ. ಸಂಕಷ್ಟಕ್ಕೊಳಗಾದ ಜನರ ಜೀವದ ಬಗ್ಗೆ ಯೋಚಿಸದ ಸರ್ಕಾರ ಮಾನ ಮರ್ಯಾದೆ ಇಲ್ಲದೆ ಜನಸ್ಪಂದನಾ ಯಾತ್ರೆ ಮಾಡಿದೆ. ಜನರಿಗೆ ಈ ಸರ್ಕಾರ ಯಾವ ಬಗ್ಗೆ ಸ್ಪಂದಿಸಿದೆ ಎಂದು ಸದನದಲ್ಲಿ ತಿಳಿಸಲಿ ಎಂದು ಅವರು ಆಗ್ರಹಿಸಿದರು.

ಸದನದಲ್ಲಿ ಈ ಸರ್ಕಾರದ ಹಗರಣಗಳ ಬಗ್ಗೆ ನಾವು ಪ್ರಶ್ನೆ ಮಾಡುವ ವಿಚಾರ ಬಿಜೆಪಿಯವರಿಗೆ ಮೈ ಚಳಿ ಹುಟ್ಟಿಸಿದೆ. ಹಾಗಾಗಿ ಅರ್ಕಾವತಿ ರಿ-ಡೂ ಪ್ರಕರಣದ ತನಿಖೆಯ ಬಗ್ಗೆ ಮಾತಾಡುತ್ತಿದ್ದಾರೆ. ಬುಟ್ಟಿಯೊಳಗಿನ ಹಾವು ಬಿಡ್ತೀವಿ ಎಂದು ಹೆದರಿಸುವ ಬದಲು ತನಿಖೆ ನಡೆಸಲಿ. ಸರ್ಕಾರ ಅವರದ್ದೇ ಅಲ್ಲವೇ? ಬ್ಲಾಕ್‌ಮೇಲ್ ಮಾಡಿದರೆ ಹೆದರುವವರು ಯಾರು?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News