ದ್ವಿತೀಯ ಪಿಯು ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

Update: 2022-09-12 06:04 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.12: ಕಳೆದ ತಿಂಗಳು ನಡೆದ ದ್ವಿತೀಯ ಪಿಯು ಪೂರಕ ಪರೀಕ್ಷೆ(2nd PU supplementary exam result)ಯ ಫಲಿತಾಂಶ ಪ್ರಕಟಗೊಂಡಿದ್ದು, ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಪೈಕಿ 37.08 ಶೇ. ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಕಟನೆ ತಿಳಿಸಿದೆ.

ಪರೀಕ್ಷೆ ಬರೆದಿದ್ದ 1,75,905 ವಿದ್ಯಾರ್ಥಿಗಳ ಪೈಕಿ 65,233 ಮಂದಿ ಉತ್ತೀರ್ಣರಾಗಿದ್ದು, 37.08 ಫಲಿತಾಂಶ ದಾಖಲಾಗಿದೆ. ಪರೀಕ್ಷೆ ಬರೆದ 1,04,947 ಬಾಲಕರ ಪೈಕಿ 36,637 ಮಂದಿ ತೇರ್ಗಡೆಯಾಗಿದ್ದು, 34.91 ಶೇ. ಫಲಿತಾಂಶ ದಾಖಲಾಗಿದ್ದರೆ, ಪರೀಕ್ಷೆ ಬರೆದ 70,958 ಬಾಲಕಿಯರ ಪೈಕಿ 28,596 ಮಂದಿ ಉತ್ತೀರ್ಣರಾಗಿ 40.30 ಶೇ. ಫಲಿತಾಂಶ ದಾಖಲಿಸಿದ್ದಾರೆ.

ಫಲಿತಾಂಶವು ಇಂದು ಸಂಬಂಧಪಟ್ಟ ಕಾಲೇಜುಗಳಲ್ಲಿ ಹಾಗೂ http://www.karresuits.nic.in/ ಜಾಲತಾಣದಲ್ಲಿ ಪ್ರಕಟವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News