×
Ad

ಬೆಂಗಳೂರು: ಆಟೊ ಚಾಲಕನ ಕೊಲೆ

Update: 2022-09-12 17:33 IST

ಬೆಂಗಳೂರು, ಸೆ.12: ಆಟೊ ಚಾಲಕನನ್ನು ಕೊಲೆ ಮಾಡಿರುವ ಘಟನೆ ಇಲ್ಲಿನ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಟೊ ಚಾಲಕ ಸಿದ್ದಿಕ್(25) ಮೃತರು ಎಂದು ಪೊಲೀಸರು ಗುರುತಿಸಿದ್ದಾರೆ. ಕೃತ್ಯ ನಡೆಸಿದ ಮತ್ತೊಬ್ಬ ಆಟೊ ಚಾಲಕ ಅಜಯ್‍ನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ ಎಂದು ಡಿಸಿಪಿ ವಿನಾಯಕ ಪಾಟೀಲ್ ತಿಳಿಸಿದ್ದಾರೆ.

ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ರವಿವಾರ ಮಧ್ಯರಾತ್ರಿ ಆಟೊ ಚಾಲಕ ಸಿದ್ದಿಕ್ ಜಾಲಹಳ್ಳಿ ಕ್ರಾಸ್ ಕಡೆ ಬಂದಿದ್ದು ಮತ್ತೊಬ್ಬ ಆಟೊ ಚಾಲಕ ಅಜಯ್‍ನ ಬಳಿ ಮಗ ನೀರು ಇದ್ದರೆ ನೀಡು ಎಂದು ಕೇಳಿದ್ದ. ಅಷ್ಟಕ್ಕೆ ಚಾಕುವಿನಿಂದ ಸಿದ್ದಿಕ್‍ಗೆ ಅಜಯ್ ಇರಿದಿದ್ದ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡ ಸಿದ್ದಿಕ್‍ನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News