×
Ad

ಗುರುವಾಯನಕೆರೆ; ರಸ್ತೆ ಗುಂಡಿ ಮುಚ್ಚುವಂತೆ ಒತ್ತಾಯಿಸಿ ವಾಹನ ಜಾಥಾ

Update: 2022-09-12 22:31 IST

ಬೆಳ್ತಂಗಡಿ; ಸೋಶಿಯಲ್ ಡೆಮೋಕ್ರಾಟಿಕ್ ಟ್ರೇಡ್ ಯೂನಿಯನ್ ವತಿಯಿಂದ ಸೋಮವಾರ ಗುರುವಾಯನಕೆರೆ ಯಿಂದ ಬೆಳ್ತಂಗಡಿಯ ವರೆಗೆ ರಸ್ತೆ ಗುಂಡಿ ಮುಚ್ಚುವಂತೆ ಒತ್ತಾಯಿಸಿ ವಾಹನ ಜಾಥಾ ನಡೆಸಿ ಬೆಳ್ತಂಗಡಿ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಂಘದ ಜಿಲ್ಲಾ ಅಧ್ಯಕ್ಷ ಜಾಕೀರ್ ಹುಸೈನ್ ಉಳ್ಳಾಲ ಗುರುವಾಯನಕೆರೆಯಿಂದ ಉಜಿರೆಯ ವರೆಗೂ ವಾಹನಗಳು ಸಂಚರಿಸಲಾಗದ ರೀತಿಯಲ್ಲಿ ಕೆಟ್ಟು ಹೋಗಿದೆ. ಬೈಕ್ ರಿಕ್ಷಾಗಳು ರಸ್ತೆಯ ಗುಂಡಿಗೆ ಬಿದ್ದರೆ ಏಳಲೂ ಸಾಧ್ಯವಿಲ್ಲದ ಸ್ಥಿತಿಯಿದೆ. ರಸ್ತೆ ದುರಸ್ತಿ ಮಾಡಲು ಶಾಸಕರು ಅಧಿಕಾರಿಗಳು ಮುಂದಾಗುತ್ತಿಲ್ಲ ಸರಕಾರ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾದೀತು ಎಂದು ಎಚ್ಚರಿಸಿದರು.

ಪ್ರತಿಭಟನಾ ಕಾರರು ಗುರುವಾಯನಕೆರೆಯಿಂದ ಬೆಳ್ತಂಗಡಿ ವರೆಗೆ ರಿಕ್ಷಾ ಜಾಥಾ ನಡೆಸಿದರು. ಪ್ರತಿಭಟನೆಯ ನೇತೃತ್ವವನ್ನು ಶಮೀಮ್ ಯೂಸುಫ್, ಸ್ವಾಲಿ ಮದ್ದಡ್ಕ, ರಿಯಾಝ್ ಪಣಕಜೆ, ಇಕ್ಬಾಲ್ ಸಾಲ್ಮರ ಹಾಗೂ ಇತರರು ವಹಿಸಿದ್ದರು.

ಪ್ರತಿಭಟನಾಕಾರರು ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಒತ್ತಾಯಿಸಿ ಬೆಳ್ತಂಗಡಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News