×
Ad

ಬೆಳ್ಳಂದೂರು ಮುಳುಗಿದರೆ ನಾನೇನು ಮಾಡಲಿ ಎನ್ನುವ ತೇಜಸ್ವಿ ಸೂರ್ಯ ದೋಸೆ ತಿನ್ನಲಷ್ಟೇ ಲಾಯಕ್ಕು: ಕಾಂಗ್ರೆಸ್

Update: 2022-09-13 14:34 IST
ಚಿತ್ರ-  (ತೇಜಸ್ವಿ ಸೂರ್ಯ ವಿರುದ್ಧ ಸೆ.10ರಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು)

ಬೆಂಗಳೂರು: 'ಬೆಳ್ಳಂದೂರಿನಲ್ಲಿ ಜನ ಮುಳುಗಿದರೆ ನಾನೇನು ಮಾಡಲಿ' ಎನ್ನುವ ಕೆಲಸಕ್ಕೆ ಬಾರದ ಸಂಸದ ತೇಜಸ್ವಿ ಸೂರ್ಯ ಅವರು ನಿರುದ್ಯೋಗಿಯಾಗಿದ್ದಾರೆ' ಎಂದು ಕಾಂಗ್ರೆಸ್ ಟೀಕಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕಾಂಗ್ರೆಸ್ ಕಳಿಸಿದ ದೋಸೆಗಾಗಿ 24ಗಂಟೆ ಬಾಯಲ್ಲಿ ನೀರು ಸುರಿಸಿಕೊಂಡು ಕಾಯುವಷ್ಟು ಒಬ್ಬ ಸಂಸದನಿಗೆ ಪುರಸೊತ್ತಿದೆ ಎಂದಾದ್ರೆ ಅವರು ದೋಸೆ ತಿನ್ನಲಷ್ಟೇ ಲಾಯಕ್ಕು. ಬಿಟ್ಟಿ ತಿನ್ನೋದಸ್ಟೇ ಬಿಜೆಪಿ ಕಾಯಕವೇ!?' ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರನ್ನು ಪ್ರಶ್ನೆ ಮಾಡಿದೆ. 

ಸಂಸದ ತೇಜಸ್ವಿ ಸೂರ್ಯ ಅವರು ಇತ್ತೀಚೆಗೆ 'ಇನ್‌ಸ್ಟಾಗ್ರಾಂನಲ್ಲಿ ದೋಸೆ ಚಿತ್ರ ನೋಡಿ ಟೆಂಪ್ಟ್‌ ಆಗಿ ದೋಸೆ ತಿನ್ನಲು ಬಂದಿದ್ದೇನೆ' ಎಂದು ಪೋಸ್ಟ್ ಮಾಡಿದ್ದ  ಪದ್ಮನಾಭ ನಗರದ ಹೋಟೆಲ್‌ವೊಂದರಲ್ಲಿ ದೋಸೆ ಸವಿಯುವ ವಿಡಿಯೊವೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು.

ತೇಜಸ್ವಿ ಸೂರ್ಯ ನಡೆಯನ್ನು ಖಂಡಿಸಿದ್ದ ಬೆಂಗಳೂರು ನಗರ ಕಾಂಗ್ರೆಸ್ ಪ್ರಚಾರ ಸಮಿತಿ ‘ಉಚಿತವಾಗಿ ಮಸಾಲೆ ದೋಸೆ' ಕಳುಹಿಸಿ ವಿನೂತನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತ್ತು. ಬಳಿಕ ಕಾಂಗ್ರೆಸ್ ನಡೆಸಿದ ಈ ಪ್ರತಿಭಟನೆಯ ಮಾದ್ಯಮ ವರದಿಗಳನ್ನು ಉಲ್ಲೇಖಿಸಿ  ಟ್ವೀಟ್ ಮಾಡಿದ್ದ ತೇಜಸ್ವಿ ಸೂರ್ಯ, “ಕಾಂಗ್ರೆಸ್ ಸುದ್ದಿಗೋಷ್ಠಿ ನಡೆಸಿ ನನ್ನ ಮನೆಗೆ ಮಸಾಲೆ ದೋಸೆ ಪಾರ್ಸೆಲ್ ಕಳುಹಿಸಿರುವುದಾಗಿ ಘೋಷಿಸಿದೆ. ಅವರು ಹೇಳಿ 24 ಗಂಟೆಗಳಿಗಿಂತ ಹೆಚ್ಚೂ ಸಮಯ ಕಳೆಯಿತು. ಆದರೆ ನನಗಿನ್ನೂ ದೋಸೆ ಸಿಕ್ಕಿಲ್ಲ. ಇದರಲ್ಲೂ ಮೋಸ ಮಾಡಿದ್ದಾರೆ. ಅವರಿಗೆ ಸರಿಯಾಗಿ ದೋಸೆಯನ್ನು ಡೆಲಿವರಿ ಮಾಡಲು ಸಾಧ್ಯವಿಲ್ಲ. ಹೀಗಿದ್ದರೂ ಅವರು ಉತ್ತಮ ಆಡಳಿತ ನೀಡುವ ಕನಸು ಕಾಣುತ್ತಾರೆ” ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದರು.

ಇದನ್ನೂ ಓದಿ: ಕಾಂಗ್ರೆಸ್ ಕಳಿಸಿದ ಮಸಾಲೆ ದೋಸೆ ಇನ್ನೂ ಬಂದಿಲ್ಲ; ಇದರಲ್ಲೂ ಮೋಸ: ಕಾಂಗ್ರೆಸ್ ಕಾಲೆಳೆದ ಸಂಸದ ತೇಜಸ್ವಿ ಸೂರ್ಯ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News