×
Ad

ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟ ರಹಿತ ಆಡಳಿತ: ಕಾಂಗ್ರೆಸ್ ಮುಖಂಡರ ಭರವಸೆ

Update: 2022-09-13 18:57 IST

ಬೆಂಗಳೂರು, ಸೆ. 13: ‘ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಶೇ.40 ಕಮಿಷನ್ ಸರಕಾರ. ಈ ಸರಕಾರದ ಭ್ರಷ್ಟಾಚಾರ ಬಯಲು ಮಾಡಲು ನಮ್ಮೊಂದಿಗೆ ಕೈಜೋಡಿಸಿ. 844-770-40-40ಗೆ ಕರೆ ಮಾಡಿ ಭ್ರಷ್ಟಾಚಾರದ ಬಗ್ಗೆ ದೂರು ನೀಡಿ. 2023ರಲ್ಲಿ ಕಾಂಗ್ರೆಸ್ ಸರಕಾರ ಈ ದೂರಿನ ಕುರಿತು ಕ್ರಮ ಕೈಗೊಳ್ಳಲಿದೆ' ಎಂದು ಕಾಂಗ್ರೆಸ್ ವಿಶೇಷ ಅಭಿಯಾನವನ್ನು ಆರಂಭಿಸಿದೆ.

ಮಂಗಳವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮೇಲ್ಮನೆ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಂ ಅಹ್ಮದ್ ಅವರ ಉಪಸ್ಥಿತಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮುಖಂಡರು, ಬಿಜೆಪಿ ಸರಕಾರದ ಭ್ರಷ್ಟಾಚಾರದ ವಿರುದ್ದ ವಾಗ್ದಾಳಿ ನಡೆಸಿದರು. 

ಭ್ರಷ್ಟ ಮುಕ್ತ ಸರಕಾರ ನೀಡುತ್ತೇವೆ: ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ‘ಬಿಜೆಪಿ ಭ್ರಷ್ಟ ಸರಕಾರ, ಶೇ.40ರಷ್ಟು ಕಮಿಷನ್ ಸರಕಾರ' ಎಂದು ಕಾಂಗ್ರೆಸ್ ಅಭಿಯಾನ ಆರಂಭಿಸುತ್ತಿದೆ. ಜನರಲ್ಲಿ ಭ್ರಷ್ಟಾಚಾರದ ವಿರುದ್ದ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ನಾವು ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ರಹಿತ ಸರಕಾರ ನೀಡುತ್ತೇವೆ. ರಾಜ್ಯವನ್ನು ಹಾಗೂ ಜನರನ್ನು ಇದರಿಂದ ಮುಕ್ತಗೊಳಿಸಬೇಕಿದೆ. ಹೀಗಾಗಿ ಈ ಅಭಿಯಾನ ಆರಂಭಿಸಿದ್ದೇವೆ' ಎಂದು ಹೇಳಿದರು.

‘ಅನೇಕರು ಈ ಸರಕಾರದ ಭ್ರಷ್ಟಾಚಾರ ಹೇಳಲು ಹಿಂಜರಿಯುತ್ತಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ವತಿಯಿಂದ ಸಹಾಯವಾಣಿ ಆರಂಭಿಸಿದ್ದೇವೆ. ಜನರು ಈ ಸಹಾಯವಾಣಿ 844 770 4040ಗೆ ಕರೆ, ವಾಟ್ಸಪ್ ಮೂಲಕ ತಿಳಿಸಿ. ಅಥವಾ www.40percentsarkaara.com ವೆಬ್‍ಸೈಟ್‍ನಲ್ಲಿ ತಿಳಿಸಬಹುದು' ಎಂದು ಸಿದ್ದರಾಮಯ್ಯ ತಿಳಿಸಿದರು.

ಮೇಲ್ಮನೆ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಮಾತನಾಡಿ, ‘ಬಿಜೆಪಿಯವರು ಜನರ ಹಿತಕ್ಕೆ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಇವರು ಕೋಮುವಾದದ ಮೇಲೆ ರಾಜಕೀಯ ಮಾಡುತ್ತಾರೆ. ಬೆಂಗಳೂರು ಹಾಗೂ ಕರ್ನಾಟಕ ಎಂದರೆ ಪ್ರಗತಿಪರ ರಾಜ್ಯ ಹಾಗೂ ನಗರ. ಆದರೆ, ಬಿಜೆಪಿಯ ಡಬಲ್ ಇಂಜಿನ್ ಸರಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ' ಎಂದು ದೂರಿದರು.

‘ಬಿಜೆಪಿ ಸರಕಾರದಲ್ಲಿ ವಿಜಯೇಂದ್ರ ತೆರಿಗೆ ಎಂದು ಸಂಗ್ರಹಿಸಲಾಗಿದೆ. ಆತ ಯಾವುದೇ ಶಾಸಕರಲ್ಲ. ಕೇವಲ ಬಿಜೆಪಿ ಪದಾಧಿಕಾರಿ. ಇವರ ಬಗ್ಗೆ ಕಾಂಗ್ರೆಸ್ ಪಕ್ಷ ಪ್ರಶ್ನೆ ಮಾಡಿದರೆ, ಮರುದಿನವೇ ಇಡಿ, ಐಟಿ, ಸಿಬಿಐ ದಾಳಿ ಆಗುತ್ತವೆ. ಬಿಜೆಪಿ ಪರವಾಗಿದ್ದ ದೊಡ್ಡ ಉದ್ಯಮಿಯೊಬ್ಬರು ಬೆಂಗಳೂರು ಪ್ರವಾಹದ ಸಂದರ್ಭದಲ್ಲಿ ಬಿಜೆಪಿ ಸರಕಾರ ಟೀಕೆ ಮಾಡಿದ್ದಕ್ಕೆ ಅವರ ಸಂಘ ಸಂಸ್ಥೆಗಳ ಮೇಲೆ ದಾಳಿ ಮಾಡಿಸಿದ್ದಾರೆ. ಇದರ ವಿರುದ್ಧ ಜನಜಾಗೃತಿ ಮೂಡಿಸಲು, ಬಿಜೆಪಿ ಹೇಗೆ ಕರ್ನಾಟಕಕ್ಕೆ ಮಸಿ ಬಳಿದಿದೆ ಎಂದು ತಿಳಿಸಲು ಈ ಅಭಿಯಾನ ಮಾಡುತ್ತಿದ್ದೇವೆ' ಎಂದು ಬಿ.ಕೆ.ಹರಿಪ್ರಸಾದ್ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಅಧಿವೇಶನ ನಡೆಯುತ್ತಿದ್ದರೂ ನಾವು ಭ್ರಷ್ಟಾಚಾರದ ವಿಚಾರವನ್ನು ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಿರುವುದೇಕೆ ಎಂಬ ಪ್ರಶ್ನೆ ಕಾಡುತ್ತಿರಬಹುದು. ಕಲಾಪದಲ್ಲಿ ಬಿಜೆಪಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ತಿಳಿಸಿದ್ದೇವೆ. ಅಧಿವೇಶನದಲ್ಲಿ ಹಾಗೂ ಹೊರಗೆ ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ಆಗಬೇಕಿದೆ' ಎಂದು ಹೇಳಿದರು.

‘ಈ ಭ್ರಷ್ಟ ಸರಕಾರವನ್ನು ಕಿತ್ತು ಹಾಕಬೇಕಿದೆ. ಹೀಗಾಗಿ ನಾವು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ನೀವು ಈ ಭ್ರμÁ್ಟಚಾರಕ್ಕೆ ಬಲಿಯಾಗಿದ್ದರೆ, ನೀವು ಸಹಾಯವಾಣಿ 8447704040ಗೆ ಕರೆ, ವಾಟ್ಸಪ್ ಮೂಲಕ ತಿಳಿಸಿ ಅಥವಾ ತಿತಿತಿ.40ಠಿeಡಿಛಿeಟಿಣsಚಿಡಿಞಚಿಚಿಡಿಚಿ.ಛಿom ವೆಬ್‍ಸೈಟ್‍ನಲ್ಲಿಯೂ ತಿಳಿಸಬಹುದು. ನಿಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಡುತ್ತೇವೆ' ಎಂದು ಅವರು ತಿಳಿಸಿದರು.

--------------------

ಕೂಡಲೇ ದೂರು ದಾಖಲಿಸಲಿ: ‘ನಮ್ಮ ಅವಧಿಯಲ್ಲಿ ತಪ್ಪು ಮಾಡಿದ್ದರೆ, ನಾನು ಇಂಧನ ಸಚಿವನಾಗಿದ್ದಾಗ ದುಬಾರಿ ಬೆಲೆಗೆ ವಿದ್ಯುತ್ ಖರೀದಿ ಮಾಡಿದ್ದೇನೆಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಕೂಡಲೇ ನನ್ನ ವಿರುದ್ಧ ಪ್ರಕರಣ ದಾಖಲಿಸಲಿ. ನಾವೆಲ್ಲರೂ ರಾಜ್ಯದ ಜನರಿಗೆ ಉತ್ತರದಾಯಿಯಾಗಿರಬೇಕು. ನಾನು ತಪ್ಪು ಮಾಡಿದ್ದರೆ, ಲಂಚ ಪಡೆದಿದ್ದರೆ, ಜನತೆಗೆ ನಾನು ದ್ರೋಹ ಮಾಡಿದ್ದರೆ ತಕ್ಷಣವೇ ಪ್ರಕರಣ ದಾಖಲಿಸಲಿ. ನಾನು ನನ್ನ ಜವಾಬ್ದಾರಿ ವಿಚಾರವಾಗಿ ಆತ್ಮವಿಶ್ವಾಸದಲ್ಲಿದ್ದೇನೆ. ನಾವು ಜನರಿಗೆ ಭ್ರಷ್ಟಾಚಾರ ರಹಿತ ಸರಕಾರ ನೀಡುತ್ತೇವೆಂಬ ವಿಶ್ವಾಸದಲ್ಲಿ ಈ ವಿಚಾರ ಹೇಳುತ್ತಿದ್ದೇನೆ’

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

----------------------------

‘ರಾಜ್ಯ ಆಳ್ತಿರೋದು-ಶೇ.40ರಷ್ಟು ಕಮಿಷನ್ ಸರಕಾರ. ರಾಜ್ಯದ ಜನರ ಕಷ್ಟಕ್ಕೆ ಕಾರಣ-ಭ್ರಷ್ಟಾಚಾರ. ಭ್ರಷ್ಟ ಬಿಜೆಪಿ ಸರಕಾರದ ಅಕ್ರಮಗಳು, ಹಗರಣಗಳು ಎಳೆದಷ್ಟೂ ಹೊರಬರುತ್ತವೆ. ಬಿಜೆಪಿ ಅಂದ್ರೆ ಭ್ರಷ್ಟಾಚಾರದ ಅಕ್ಷಯಪಾತ್ರೆ!'

-ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News