ಕೊಲ್ಲರಕೋಡಿ ಸ್ಪೋರ್ಟ್ಸ್ ಫೆಸ್ಟ್-2022
Update: 2022-09-14 15:22 IST
ನರಿಂಗಾನ: ಕೊಲ್ಲರಕೋಡಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ (KASC) ವತಿಯಿಂದ ಸ್ಥಳೀಯರಿಗೆ ಆಯೋಜಿಸಿದ್ದ 'ಕೊಲ್ಲರಕೋಡಿ ಸ್ಪೋರ್ಟ್ಸ್ ಫೆಸ್ಟ್-2022' ಕ್ರೀಡಾಕೂಟ ರವಿವಾರ ಇಲ್ಲಿನ ಶಾಲಾ ಮೈದಾನದಲ್ಲಿ ನಡೆಯಿತು.
ರಾಷ್ರೀಯ ಗೀತೆಯೊಂದಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಯಿತು.
ಕ್ರೀಡಾಕೂಟದಲ್ಲಿ ಕ್ರಿಕೆಟ್, ಫುಟ್ಬಾಲ್, ಹಗ್ಗಜಗ್ಗಾಟ, ಕಬಡ್ಡಿ, ಮಡಿಕೆ ಒಡೆಯುವುದು, ಓಟದ ಸ್ಪರ್ಧೆ, ರಿಲೇ, ಸ್ಲೋ ಬೈಕ್ ರೇಸ್, ಗೋಣಿಚೀಲ ಓಟ, ಮೈದಾ ಕಾಯಿನ್ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಊರಿನ ಹಿರಿಯರು, ಯುವಕರು, ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಂಭ್ರಮಿಸಿದರು.
ಸ್ಪೋರ್ಟ್ಸ್ ಫೆಸ್ಟ್ ನಲ್ಲಿ ಊರಿನ ನಾಲ್ಕು ತಂಡಗಳು ಬಾಗವಹಿಸಿದ್ದು, SAI ಸೂಪರ್ ಕಿಂಗ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿತು.
ಸಮಾರೋಪ ಸಮಾರಂಭದಲ್ಲಿ RKC ವಂಡರ್ ಸಿಟಿ ಮಾಲಕ ಅಝೀಝ್, ಫಯಾಝ್ ಕೆ.ಸಿ.ರೋಡ್ ಭಾಗವಹಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.