ಬೆಂಗಳೂರು: ಪುತ್ರನನ್ನು ಕೊಲೆಗೈದು ತಾಯಿ ಆತ್ಮಹತ್ಯೆ
Update: 2022-09-14 15:58 IST
ಬೆಂಗಳೂರು, ಸೆ.14: ಪುತ್ರನನ್ನು ಕೊಲೆಗೈದ ತಾಯಿ, ಬಳಿಕ ಆಕೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಹೊಸಗುಡ್ಡದ ಹಳ್ಳಿಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಹೊಸಗುಡ್ಡದ ಹಳ್ಳಿಯ 13 ವರ್ಷದ ಮಗ ಮದನ್‍ಗೆ ನೇಣು ಬಿಗಿದ ಬಳಿಕ ತಾಯಿಯೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
48 ವರ್ಷದ ತಾಯಿ ಲಕ್ಷಮ್ಮಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಬ್ಯಾಟರಾಯನಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮೈಸೂರು: ಕೆಎಸ್‌ಒಯು ಆವರಣದಲ್ಲಿ ವಾಮಾಚಾರ; ದೂರು