ಆರ್ಥಿಕವಾಗಿ ಸಂಕಷ್ಟದಲ್ಲಿರುವವರಿಗೆ ಆಸರೆ ನೀಡಲು ವಿಶ್ವ ಬಂಟರ ಮಾಹಿತಿ ಸಂಗ್ರಹ ಯೋಜನೆ: ಅಜಿತ್ ಕುಮಾರ್ ರೈ
ಮಂಗಳೂರು: ಬಂಟರ ಸಮಾಜದಲ್ಲಿ ಇನ್ನೂ ಸಾಕಷ್ಟು ಕುಟುಂಬಗಳು ಬಡತನದಲ್ಲಿದ್ದು ಶಿಕ್ಷಣ, ವೈದ್ಯಕೀಯ ವೆಚ್ಚ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಇಂತಹ ಕುಟುಂಬಗಳಿಗೆ ನೆರವು ನೀಡಲು ಬಂಟರ ಕುಟುಂಬಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿಗಳ ಸಮೀಕ್ಷೆಯ ಅಗತ್ಯವಿದೆ ಎಂದು ಮಾಲಾಡಿ ಅಜಿತ್ ಕುಮಾರ್ ರೈ ತಿಳಿಸಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತ ಮಹೋತ್ಸವ ದ ಉದ್ಘಾಟನಾ ಸಮಾರಂಭದ ಆಹ್ವಾನ ಪತ್ರಿಕೆ ಮತ್ತು ವಿಶ್ವ ಬಂಟರ ಮಾಹಿತಿ ಕೋಶದ ಮಾಹಿತಿ ಸಂಗ್ರಹ ಯೋಜನೆಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾ ರಂಭ ದಲ್ಲಿಂದು ಅಧ್ಯಕ್ಷ ತೆ ವಹಿಸಿ ಅವರು ಮಾತನಾಡಿದರು.
ಈ ಮಹತ್ವದ ಯೋಜನೆ ಗೆ ಸಮಾಜದ ಎಲ್ಲರ ಸಂಘಟಿತ ಪ್ರಯತ್ನದ ಅಗತ್ಯವಿದೆ ಎಂದರು. ಸಮಾಜ ದಲ್ಲಿ ಸ್ವಲ್ಪ ಮಂದಿ ಆರ್ಥಿಕ ವಾಗಿ ಸಮರ್ಥರಾದವರು ಇದ್ದಾರೆ. ಅವರ ಮಾಹಿತಿ ಪಡೆದು ಸಮಾಜದ ಬಡವರಿಗೆ ನೆರವಾಗಲು ಈ ಯೋಜನೆ ಪೂರ್ಣ ಗೊಂಡಾಗ ಸಾಧ್ಯ ವಾಗಬಹುದು ಎಂದು ಅಜಿತ್ ಕುಮಾರ್ ರೈ ತಿಳಿಸಿದ್ದಾರೆ.
ಸಮಾರಂಭದ ವೇದಿಕೆ ಯಲ್ಲಿ ಆಮಂತ್ರಣ ಪತ್ರಿಕೆಯನ್ನು ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಪೃಥ್ವಿ ರಾಜ ರೈ ಬಿಡುಗಡೆ ಗೊಳಿಸಿ ಶುಭಹಾರೈಸಿದರು .ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶು ಪಾಲರಾದ ಅನಸೂಯ ರೈ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಶುಭ ಹಾರೈಸಿದರು. ಶ್ರೀ ರಾಮಕೃಷ್ಣ ವಿದ್ಯಾರ್ಥಿನಿ ಭವನದ ಅಮೃತೋತ್ಸವ ಸಮಿತಿಯ ಸಂಚಾಲಕರಾದ ಶಾಲಿನಿ ಶೆಟ್ಟಿ ಅಮೃತೋತ್ಸವದ ಯೋಜನೆ ಗಳ ಬಗ್ಗೆ ತಿಳಿಸಿದರು.
ಉತ್ಸವ ಸಮಿತಿಯ ಅಧ್ಯಕ್ಷೆ ವೀಣಾ ಶೆಟ್ಟಿ ಸ್ವಾಗತಿಸಿದರು. ಮಾತೃ ಸಂಘದ ಉಪಾ ಧ್ಯಕ್ಷ ಹೇಮನಾಥ ಶೆಟ್ಟಿ ವಂದಿಸಿದರು.