ನಾವು ಚರಂಡಿ ಒತ್ತುವರಿ ಮಾಡಿದ್ದು ನಿಜ : ಬೆಂಗಳೂರಿನ ಟೆಕ್ ಪಾರ್ಕ್

Update: 2022-09-15 02:32 GMT
ಫೈಲ್‌ ಫೋಟೊ 

ಬೆಂಗಳೂರು: ಮಳೆ ನೀರಿನ ಚರಂಡಿ ಒತ್ತುವರಿ ಮಾಡಿಕೊಂಡಿರುವುದು ನಿಜ ಎಂದು ಪೂರ್ವ ಬೆಂಗಳೂರಿನ ಟೆಕ್ ಪಾರ್ಕ್ ಒಪ್ಪಿಕೊಂಡಿದೆ. ಆದರೆ ಪಕ್ಕದ ಪೂರ್ವ ಪಾರ್ಕ್ ರಿಡ್ಜ್‌ನ ಬಿಲ್ಡರ್ ಪೂರ್ವಂಕರ ವಿರುದ್ಧ ಕಂಪನಿ ಆರೋಪ ಮಾಡಿದೆ.

ಕಳೆದ ವಾರ ಭೀಕರ ಪ್ರವಾಹ ಪರಿಸ್ಥಿತಿಗೆ ಕಾರಣವಾಗಿದ್ದ ಮಳೆ ನೀರಿನ ಚರಂಡಿ ಒತ್ತುವರಿ ಮಾಡಿಕೊಂಡ 15 ದೊಡ್ಡ ಹೆಸರುಗಳ ಪೈಕಿ ಬಾಗಮನೆ ಸಮೂಹ ಅಭಿವೃದ್ಧಿಪಡಿಸಿದ ಬಾಗಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್ ಹೆಸರು ಕೂಡಾ ಕೇಳಿ ಬಂದಿತ್ತು. ಪಕ್ಕದ ಪೂರ್ವಂಕರ ಪೂರ್ವ ರಿಡ್ಜ್ ಪ್ರದೇಶದಲ್ಲೂ ಒತ್ತುವರಿಯಾಗಿರುವುದು ಬುಧವಾರ ನಡೆದ ಎರಡನೇ ಸಮೀಕ್ಷೆಯಲ್ಲಿ ದೃಢಪಟ್ಟಿದೆ.‌

ಐಟಿ ಕಾರಿಡಾರ್‌ ನಲ್ಲಿರುವ ಬಾಗಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್, ಮಳೆನೀರಿನ ಚರಂಡಿಯ ಸುಮಾರು 2.4 ಮೀಟರ್ ಒತ್ತುವರಿ ಮಾಡಿಕೊಂಡಿರುವುದು ಸಮೀಕ್ಷೆ ವೇಳೆ ತಿಳಿದುಬಂದಿದೆ. "ನಾವು ಮಳೆ ನೀರಿನ ಚರಂಡಿಯನ್ನು ಸ್ಲ್ಯಾಬ್‍ಗಳಿಂದ ಮುಚ್ಚಿರುವುದು ನಿಜ" ಎಂದು ಬಾಗಮನೆ ಸಮೂಹದ ಪ್ರಧಾನ ವ್ಯವಸ್ಥಾಪಕ ಜಿ.ಪಿ.ಚಕ್ರವರ್ತಿ ಹೇಳಿದ್ದಾರೆ. ಬೋಯಿಂಗ್, ಅಕ್ಸೆಂಚರ್, ಇವೈ, ಡೆಲ್ ಮತ್ತು ಎರಿಕ್‍ಸನ್‍ನಂಥ ಕಂಪನಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಮಹಾದೇವಪುರ ಕೆರೆಯಿಂದ ಹಿನ್ನೀರು ಹರಿಯುವುದನ್ನು ತಡೆಯಲು ಈ ಕ್ರಮ ಕೈಗೊಂಡಿದ್ದೇವೆ. ದೊಡ್ಡ ಅಪರಾಧಿ ಪೂರ್ವಂಕರ ಪೂರ್ವರಿಡ್ಜ್ ವಿಲ್ಲಾಗಳು. ಅವರು ಮಳೆ ನೀರಿನ ಚರಂಡಿಯನ್ನು ಬಹುತೇಕ ಮುಚ್ಚಿದ್ದಾರೆ" ಎಂದು ಅವರು ಹೇಳಿದ್ದಾರೆ.

ಪೂರ್ವಾಂಕರ ಪೂರ್ವ ಪಾರ್ಕ್ ರಿಡ್ಜ್‌ನಲ್ಲಿ 149 ವಿಲ್ಲಾಗಳಿದ್ದು, ಎಲ್ಲ ಮೂರು ಅಥವಾ ನಾಲ್ಕು ಬೆಡ್‍ರೂಂ ಹೊಂದಿವೆ. ಇದು ಚರಂಡಿಯನ್ನು ಸುಮಾರು 2.5 ಮೀಟರ್‍ನಷ್ಟು ಒತ್ತುವರಿ ಮಾಡಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ndtv.com ವರದಿ ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News