ರಾಜಕಾಲುವೆ ಒತ್ತುವರಿ; CAG ವರದಿ ಮಾಹಿತಿ ನೀಡಿಕೆಗೆ ಸಮಯಾವಕಾಶ ಕೋರಿಕೆ: ವಿಚಾರಣೆ ಮುಂದೂಡಿದ ಹೈಕೋರ್ಟ್

Update: 2022-09-16 13:34 GMT

ಬೆಂಗಳೂರು, ಸೆ.16: ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿಗೆ ಸಂಬಂಧಿಸಿದಂತೆ ಮಹಾಲೇಖಪಾಲರ(ಸಿಎಜಿ) ವರದಿಯಲ್ಲಿನ ಉಲ್ಲೇಖದ ಕುರಿತು ಮಾಹಿತಿ ನೀಡಿಕೆಗೆ ಬಿಬಿಎಂಪಿ ಪರ ವಕೀಲರು ಕಾಲಾವಕಾಶ ಕೋರಿದ್ದರಿಂದ ವಿಚಾರಣೆಯನ್ನು ಹೈಕೋರ್ಟ್ ಸೆ.19ಕ್ಕೆ ಮುಂದೂಡಿದೆ.

ಬೆಂಗಳೂರಿನ ರಸ್ತೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಶುಕ್ರವಾರ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಪಿಐಎಲ್ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಪೀಠವು ಗುರುವಾರ ವಿಚಾರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಬೆಂಗಳೂರು ನಗರದಲ್ಲಿ ರಾಜಕಾಲುವೆ ಒತ್ತುವರಿ ಕುರಿತು ಸಿಎಜಿ ವರದಿಯ ವಿಚಾರವಾಗಿ ಸೂಚನೆ ಪಡೆಯಲು ಬಿಬಿಎಂಪಿ ವಕೀಲರು ಕಾಲಾವಕಾಶ ಕೋರಿದ್ದರು. ಹೀಗಾಗಿ, ನ್ಯಾಯಪೀಠವು ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು. ಸಿಎಜಿ ಕುರಿತು ಮಾಹಿತಿ ನೀಡಿಕೆಗೆ ಮತ್ತೆ ಕಾಲಾವಕಾಶ ಕೋರಿದ್ದರಿಂದ ನ್ಯಾಯಪೀಠವು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಿದೆ.

ರಾಜಕಾಲುವೆ ಒತ್ತುವರಿ ತೆರವಿಗೆ ಸಂಬಂಧಿಸಿದ ಕ್ರಿಯೆ ಸ್ಥಗಿತವಾಗಿದೆಯೇ? ಒತ್ತುವರಿಗೆ ಸಂಬಂಧಿಸಿದಂತೆ ಬೇರೆ ಯಾವುದಾದರೂ ಪ್ರಾಧಿಕಾರವು ಪರ್ಯಾಯವಾಗಿ ತನಿಖೆ ನಡೆಸುತ್ತಿದೆಯೇ? ಎಂಬುದು ನ್ಯಾಯಾಲಯ ತಿಳಿಸಬೇಕಿದೆ. ಗುತ್ತಿಗೆದಾರರು ಸಾರ್ವಜನಿಕ ಸೇವೆ ಮಾಡುತ್ತಿಲ್ಲ. ಹಣ ಮಾಡಲು ಅವರು ಇದ್ದಾರೆ. ಅವರನ್ನು ಬಿಬಿಎಂಪಿ ನಿಯಂತ್ರಿಸಬೇಕೆಂದು ಈ ಹಿಂದೆ ನ್ಯಾಯಪೀಠವು ಮೌಖಿಕವಾಗಿ ತಿಳಿಸಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News