×
Ad

ಸೆ.20: ರಾಜ್ಯ ಸರಕಾರದ ತಾರತಮ್ಯ ವಿರೋಧಿಸಿ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ

Update: 2022-09-16 22:48 IST

ಮಂಗಳೂರು : ದ.ಕ.ಜಿಲ್ಲೆಯಲ್ಲಿ  ನಡೆದಿರುವ  ಮೂರು ಹತ್ಯೆಗಳ ತನಿಖೆ ನಡೆಸುವಲ್ಲಿ  ಹಾಗೂ  ಪರಿಹಾರ ನೀಡುವಲ್ಲಿ   ರಾಜ್ಯ ಸರಕಾರ  ತಾರತಮ್ಯ ಎಸಗುತ್ತಿರುವುದನ್ನು ವಿರೋಧಿಸಿ  ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದಿಂದ ಸೆ.20ರಂದು ನಗರದ  ಕುದ್ಮುಲ್ ರಂಗರಾವ್ ಪುರಭವನ ಎದುರಿನ ಗಾಂಧಿ ಪಾರ್ಕ್‌ನಲ್ಲಿ  ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು  ಘಟಕದ ಅಧ್ಯಕ್ಷ  ಶಾಹುಲ್ ಹಮೀದ್  ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ  ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ  ಈ ಬಗ್ಗೆ  ವಿವರಿಸಿದ ಅವರು  ಬೆಳಗ್ಗೆ 9.30ರಿಂದ ಸಂಜೆ 3.30ರವರೆಗೆ ನಡೆಯುವ ಈ ಮೌನ ಪ್ರತಿಭಟನೆಯಲ್ಲಿ ಫಾಝಿಲ್ ಮತ್ತು ಮಸೂದ್ ಕುಟುಂಬಸ್ಥರು ಕೂಡ ಭಾಗವಹಿಸಲಿದ್ದಾರೆ ಎಂದರು.

ಹತ್ಯೆಗೆ ಒಳಗಾದ ಮೂವರ ಪೈಕಿ ಓರ್ವರ  ಕುಟುಂಬಕ್ಕೆ   ಮಾತ್ರ  ಸರ್ಕಾರ ಪರಿಹಾರ ನೀಡಿದೆ. ಉಳಿದ ಇಬ್ಬರ ಕುಟುಂಬಕ್ಕೆ ಪರಿಹಾರ ನೀಡಿಲ್ಲ. ಒಬ್ಬರ ಹತ್ಯೆ ಪ್ರಕರಣವನ್ನು   ಮಾತ್ರ ಎನ್‌ಐಎ ತನಿಖೆಗೆ ವಹಿಸಿದೆ.  ಸುರತ್ಕಲ್ ಫಾಝಿಲ್ ಹತ್ಯೆಯ ಹಂತಕರಿಗೆ ಆಶ್ರಯ ನೀಡಿದಾತನಿಗೆ ಇದೀಗ  ಜಾಮೀನು ಕೂಡ ಲಭಿಸಿದೆ. ಸರಕಾರದ ಈ ತಾರತಮ್ಯ ನೀತಿಯನ್ನು   ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾಕ ಘಟಕ ಖಂಡಿಸುತ್ತಿದೆ ಎಂದರು.

ದ.ಕನ್ನಡ ಜಿಲ್ಲೆಯಲ್ಲಿ  ನಡೆದಿರುವ ಮೂರು ಹತ್ಯೆಗಳ ಬಗ್ಗೆ  ಹಾಗೂ ರಾಜ್ಯ ಸರಕಾರದ  ತಾರತಮ್ಯ ನೀತಿಗಳ ವಿರುದ್ಧ ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್ ಶಾಸಕರಿಗೆ ಅವಕಾಶ ನೀಡುತ್ತಿಲ್ಲ  ಎಂದವರು ಆರೋಪಿಸಿದರು.

ಮುಖಂಡರಾದ ಅಬ್ಬಾಸ್ ಆಲಿ, ಅಲ್ವಿನ್  ಪ್ರಕಾಶ್ ಸಿಕ್ವೇರ, ಶಬ್ಬೀರ್  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News