×
Ad

ರಾಷ್ಟ್ರೀಯ ಸೇವಾ ಯೋಜನೆ; ರಾಷ್ಟ್ರಮಟ್ಟದ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಗೆ ರಶ್ಮಿ ಜೆ ಅಂಚನ್ ಆಯ್ಕೆ

Update: 2022-09-16 22:53 IST

ಮಂಗಳೂರು: ರಾಷ್ಟ್ರೀಯ ಸೇವಾಯೋಜನೆ 2020 2021 ನೇ ಸಾಲಿನ ರಾಷ್ಟ್ರಮಟ್ಟದ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಸ್ವಯಂ ಸೇವಕಿ ರಶ್ಮಿ ಜೆ ಅಂಚನ್ ಆಯ್ಕೆಯಾಗಿರುತ್ತಾರೆ.

ಇವರು ಪ್ರಸ್ತುತ ಸುರತ್ಕಲ್ ಗೋವಿಂದದಾಸ  ಕಾಲೇಜಿನ ಅಂತಿಮ  ಪದವಿ ವಿದ್ಯಾರ್ಥಿಯಾಗಿರುತ್ತಾರೆ. ಇತ್ತೀಚಿಗೆ ಇವರು ರಾಜ್ಯ ಮಟ್ಟದ ಅತ್ಯುತ್ತಮ ಸ್ವಯಂ ಸೇವಕಿ ಪ್ರಶಸ್ತಿಯನ್ನು ಪಡೆದಿರುತ್ತಾರೆ ಎಂದು ಮಂಗಳೂರು ವಿಶ್ವ ವಿದ್ಯಾ ನಿಲಯದ  ಸಂಯೋಜನಾಧಿಕಾರಿ ಡಾ. ನಾಗರತ್ನ ಕೆ. ಎ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News