×
Ad

ಮಾದಕ ವಸ್ತು ಪ್ರಕರಣ: ಆರೋಪಿಯ ಆಸ್ತಿ ಜಪ್ತಿ ಮಾಡಿದ ಸಿಸಿಬಿ ಅಧಿಕಾರಿಗಳು

Update: 2022-09-17 17:28 IST

ಬೆಂಗಳೂರು, ಸೆ.17:ಮಾದಕ ಸರಬರಾಜು ದಂಧೆಯಿಂದ ಗಳಿಸಿದ್ದ ಆರೋಪಿಯ ಆಸ್ತಿಯನ್ನು ಸಿಸಿಬಿ ಮುಟ್ಟುಗೋಲು ಹಾಕಿಕೊಂಡಿದೆ.

ಮೃತ್ಯುಂಜಯ ಎಂಬ ಆರೋಪಿ 1.60 ಕೋಟಿ ರೂ.ಮೌಲ್ಯದ ಆಸ್ತಿಯನ್ನ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. 2007ರಿಂದಲೂ ಸುಮಾರು 9 ಎನ್‍ಡಿಪಿಎಸ್ ಪ್ರಕರಣಗಳಲ್ಲಿ ಆರೋಪಿ ಕೆಆರ್ ಪುರ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. 

ಬಂಧಿತನಿಂದ 80 ಲಕ್ಷ ರೂ.ಮೌಲ್ಯದ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿತ್ತು. ಆರೋಪಿಯ ಹೆಸರಿನಲ್ಲಿದ್ದ ಹೊಸಕೋಟೆ ನಗರದ 1 ವಾಣಿಜ್ಯ ನಿವೇಶನ, ಕೋಲಾರದ ಕೆಂಚಿಪುರ ಹಾಗೂ ಕಂಬಿಪುರದಲ್ಲಿರು 2 ನಿವೇಶನಗಳು, 6 ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 44,387 ರೂ., ಜಪ್ತಿ ಮಾಡಲಾಗಿದೆ. 

ಆರೋಪಿಯ ಪತ್ನಿಯ ಬ್ಯಾಂಕ್ ಖಾತೆಗಳಿಗೆ ವಿವಿಧ ಮೂಲದಿಂದ 5 ಕೋಟಿಗೂ ಅಧಿಕ ಹಣ ಅಕ್ರಮವಾಗಿ ಸಂದಾಯವಾಗಿರುವುದು ಸಹ ಪತ್ತೆಯಾಗಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಸಿಸಿಬಿ ಹಿರಿಯ ಪೊಲೀಸ್ ಅಧಿಕಾರಿವೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News