×
Ad

​ಕಲ್ಲಾಪು: ಸಮುದಾಯ ಆಧಾರಿತ ಕಾರ್ಯಕ್ರಮ

Update: 2022-09-17 22:43 IST

ಉಳ್ಳಾಲ: ದ.ಕ.ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ಇದರ ಆಶ್ರಯದಲ್ಲಿ ಪೋಷನ್ ಮಾಸಾಚರಣೆ ಪ್ರಯುಕ್ತ  ಪೋಷಣ್ ಅಭಿಯಾನ್ ಯೋಜನೆಯಡಿಯಲ್ಲಿ ಸಮುದಾಯ ಆಧಾರಿತ ಕಾರ್ಯಕ್ರಮ ವು ಕಲ್ಲಾಪು ಪಟ್ಲದಲ್ಲಿ ನಡೆಯಿತು.

ಉಳ್ಳಾಲ ನಗರ ಸಭೆ ಕೌನ್ಸಿಲರ್ ಬಾಜಿಲ್ ಡಿಸೋಜ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಡಾ. ಶ್ರೀನಿವಾಸ ಅವರು ಮಾತನಾಡಿ, ಬುದ್ಧಿ ಬೆಳವಣಿಗೆಗೆ ಪೋಷಣೆ ಅಗತ್ಯ ಇದೆ.ಸಣ್ಣ ವಯಸ್ಸಿನಲ್ಲಿ ಪೋಷಣೆ ಮಾಡುತ್ತಾ ಬಂದರೆ  ಆರೋಗ್ಯ ದಲ್ಲಿ ತೊಂದರೆ ಬರುವುದಿಲ್ಲ. ಆರೋಗ್ಯಕ್ಕೆ ಯೋಗ್ಯ ವಲ್ಲದ ಆಹಾರ ನೀಡಿದರೆ ಆರೋಗ್ಯ ದ ಮೇಲೆ ಪರಿಣಾಮ ಬೀರುತ್ತದೆ ಎಂದು ಮಾಹಿತಿ ನೀಡಿದರು. 

ಅಂಗನವಾಡಿ ಫೆರ್ಮನ್ನೂರು ಮೇಲ್ವಿಚಾರಕ ಸೀತಾ ಪ್ರಾಸ್ತಾವಿಕವಾಗಿ ಮಾತನಾಡಿದರು.ಉಳ್ಳಾಲ ನಗರಸಭೆ
ಕೌನ್ಸಿಲರ್ ಮುಸ್ತಾಕ್ ಪಟ್ಲ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ದಲ್ಲಿ ಹಿರಿಯ ಆರೋಗ್ಯ ಸಹಾಯಕಿ ಶೈಲೇಟ್ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಸ್ವರ್ಣ ಲತಾ ಕಾರ್ಯಕ್ರಮ ನಿರೂಪಿಸಿದರು.
ವಿಜೇತ, ಸ್ವಾಗತಿಸಿದರು.ಮೀನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News