ನಕಲಿ ವೆಬ್‍ಸೈಟ್ ಮೂಲಕ ವಂಚನೆ: ಮೂವರು ಆರೋಪಿಗಳ ಬಂಧನ

Update: 2022-09-18 12:39 GMT

ಬೆಂಗಳೂರು, ಸೆ.18: ವಿಆರ್‍ಎಲ್ ಮೂವರ್ಸ್ ಅಂಡ್ ಪ್ಯಾಕರ್ಸ್ ಎಂಬ ಹೆಸರಿನಲ್ಲಿ ನಕಲಿ ವೆಬ್‍ಸೈಟ್ ತೆರದು ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದಡಿ ಮೂವರನ್ನು ಈಶಾನ್ಯ ವಿಭಾಗದ ಸೈಬರ್ ಕ್ರೈಂ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಬಿಹಾರ ಮೂಲದ ಯಶವಂಪುರದ ಬ್ರಹ್ಮದೇವ್ ಯಾದವ್(25), ಮುಕೇಶ್ ಕುಮಾರ್ ಯಾದವ್( 20)ಹಾಗೂ ವಿಜಯ್ ಕುಮಾರ್ ಯಾದವ್(22) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಅನೂಪ್ ಎ.ಶೆಟ್ಟಿ ತಿಳಿಸಿದ್ದಾರೆ.

ವ್ಯಕ್ತಿಯೊಬ್ಬರು ತಮ್ಮ ದ್ವಿಚಕ್ರ ವಾಹನವನ್ನು ನಗರದಿಂದ ಸಾಗರಕ್ಕೆ ಕಳುಹಿಸಲು ವಿಆರ್‍ಎಲ್ ಮೂವರ್ಸ್ ಅಂಡ್ ಪ್ಯಾಕರ್ಸ್ ಹೆಸರಿನ ವೆಬ್‍ಸೈಟ್‍ನಲ್ಲಿ ಸಂಪರ್ಕಿಸಿದ್ದಾರೆ. ಆನಂತರ, ಆರೋಪಿಗಳು ವ್ಯಕ್ತಿಯ ಮನೆಗೆ ತೆರಳಿ ವಾಹನ ಸಮೇತ ನಗದು ಪಡೆದುಕೊಂಡಿದ್ದಾರೆ. ಬಳಿಕ ಹೆಚ್ಚುವರಿ ಹಣ ನೀಡಬೇಕು, ಇಲ್ಲದಿದ್ದರೆ ವಾಹನ ನೀಡುವುದಿಲ್ಲ ಎಂದು ಬೆದರಿಕೆವೊಡ್ಡಿದ್ದಾರೆ ಎನ್ನಲಾಗಿದೆ.

ಇದರಿಂದ ಅನುಮಾನಗೊಂಡ ವ್ಯಕ್ತಿಯೂ, ಪೊಲೀಸರಿಗೆ ದೂರು ನೀಡಿದ್ದಾರೆ. ದೂರನ್ನು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಯಶವಂತಪುರ ಬಳಿ ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿಯು ವಿಆರ್‍ಎಲ್ ಎಂಬ ಹೆಸರಿನಲ್ಲಿ ಅಲ್ಲದೇ ಬೇರೆ ಬೇರೆ ಪ್ಯಾಕರ್ಸ್ ಅಂಡ್ ಮೂವರ್ಸ್ ಎಂಬ ವೆಬ್‍ಸೈಟ್ ಹೆಸರಿನಲ್ಲಿ ವೆಬ್‍ಸೈಟ್ ಸೃಷ್ಟಿಸಿ ವಂಚನೆಗೈದಿರುವುದು ಬೆಳಕಿಗೆ ಬಂದಿದೆ ಎಂದು ಡಿಸಿಪಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News