ಈ ಬಾರಿಯ 'ಮಂಗಳೂರು ದಸರಾ' ವಿಶಿಷ್ಟವಾಗಿ ನಡೆಯಲಿದೆ: ಜನಾರ್ದನ ಪೂಜಾರಿ

Update: 2022-09-18 17:18 GMT

ಮಂಗಳೂರು, ಸೆ.18: ಈ ಬಾರಿ ಮಂಗಳೂರು ದಸರಾ ಹಿಂದಿನ ದಸರಾಕ್ಕಿಂತಲೂ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣ ನಾಥ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ಸುದ್ದಿ ಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ರಾಜ್ಯದ ಮುಖ್ಯಮಂತ್ರಿಯವರಿಗೂ ಆಹ್ವಾನ ನೀಡಲಾಗುವುದು. ಅವರು ಭೇಟಿ ನೀಡುತ್ತಾರೆ ಎನ್ನುವ ವಿಶ್ವಾಸವಿದೆ. ಕೊರೋನ ಕಾರಣದಿಂದ ಈ ಹಿಂದಿನ ವರ್ಷ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಹಿಂದಿನ ವರ್ಷ ಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ. ನಗರದಲ್ಲಿ ವಿಶೇಷ ವಾಗಿ ದೀಪಾಲಂಕಾರ ಮಾಡಲಾಗುವುದು ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.

ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ ಯವರ ಮಾರ್ಗದರ್ಶನದಲ್ಲಿ ಈ ಬಾರಿ ಮಂಗಳೂ ರು ದಸರಾ ವಿಜೃಂಭಣೆಯಿಂದ ನಡೆಯಲಿದೆ. ಪ್ರತಿದಿನ ಅನ್ನದಾನ ನಡೆಯಲಿದೆ. ಈ ಹಿಂದೆ ಸುಮಾರು 2ಲಕ್ಷ ಜನರಿಗೆ ದಸರಾ ಸಂದರ್ಭದಲ್ಲಿ ಅನ್ನದಾನ ನೀಡಲಾಗುತ್ತಿತ್ತು. ಈ ಬಾರಿ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ.12 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಗೊಂಡ ಶಾರದೆಗೆ ರಜತ ಪೀಠ ಕ್ಷೇತ್ರದ ಭಕ್ತರ ವತಿಯಿಂದ ನೀಡಲಾ ಗುವುದು. ಭಕ್ತರ ಒಂದು ಕುಟುಂಬದ ವತಿಯಿಂದ ಶಾರದಾ ದೇವಿಗೆ ರಜತ ವೀಣೆ ಸಮರ್ಪಣೆ ಮಾಡಲಿದ್ದಾರೆ. ಸೆ.26ರಿಂದ ಅ.6ರವರೆಗೆ ಶ್ರೀ ಕ್ಷೇತ್ರ ಕುದ್ರೋಳಿ ಯಲ್ಲಿ ಮಂಗಳೂರು ದಸರಾ ನಡೆಯಲಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಕೋಶಾ ಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕಾರ್ಯ ದರ್ಶಿ ಬಿ.ಮಾಧವ ಸುವರ್ಣ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್,‌ ಮಂಡಳಿಯ ಪದಾಧಿಕಾರಿಗಳಾದ ರವಿಶಂಕರ್ ಮಿಜಾರ್, ಕೆ.ಮಹೇಶ್ಚಂದ್ರ, ಎಂ.ಶೇಖರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ದೇವೇಂದ್ರ ಪೂಜಾರಿ, ಬಿ.ಜಿ.ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News