ಸೆ.21ರಿಂದ 25ರವರೆಗೆ ಬೇಕಲ್ ಉಸ್ತಾದರ ಆಂಡ್ ನೇರ್ಚೆ

Update: 2022-09-19 09:27 GMT

ಕೊಣಾಜೆ, ಸೆ.19: ಮೊಂಟೆಪದವು ಮರಿಕ್ಕಳ ಜುಮಾ ಮಸೀದಿ ವಠಾರದಲ್ಲಿ ಅಂತ್ಯ ವಿಶ್ರಮಗೊಳ್ಳುತ್ತಿರುವ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಎರಡನೇ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕೋತ್ಸವ ಸೆ.21ರಿಂದ 25ರವರೆಗೆ ಮರಿಕ್ಕಳ ಜುಮಾ ಮಸೀದಿಯಲ್ಲಿ ಜರುಗಲಿದೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ತಿಳಿಸಿದ್ದಾರೆ.

ಅವರು ಮರಿಕ್ಕಳ ಜುಮಾ ಮಸೀದಿ ವಠಾರದಲ್ಲಿಂದು ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.21ರಂದು ಮರಿಕ್ಕಳ ಜುಮಾ ಮಸ್ಜಿದ್ ಅಧ್ಯಕ್ಷ ಅಬ್ಬಾಸ್ ಕೊಡಂಚಿಲ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಂಜೆ 7ಕ್ಕೆ ಉದ್ಘಾಟನಾ ಸಮಾರಂಭ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಜರುಗಲಿದೆ. 8ಕ್ಕೆ ಸೈಯದ್ ತ್ವಾಹಾ ತಂಙಳ್ ಪೂಕೋಟೂರು ನೇತೃತ್ವದಲ್ಲಿ ಬುರ್ದಾ ಮಜ್ಲಿಸ್ ನಡೆಯಲಿದೆ.

ಸೆ.22ರಂದು ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಭಾಷಣಗೈಯ್ಯಲಿದ್ದಾರೆ. ಕಾಸರಗೋಡು ಸಅದಿಯ್ಯ ಜಾಮಿಯ ಪ್ರೊಫೆಸರ್ ಹುಸೈನ್ ಸಅದಿ ಕೆ.ಸಿ.ರೋಡ್ ಪ್ರವಚನ ನೀಡಲಿದ್ದಾರೆ.

ಸೆ.23ರಂದು ಶೈಖುನಾ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್, ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್ ಮುಖ್ಯ ಭಾಷಣ ಹಾಗೂ ರಫೀಕ್ ಸಅದಿ ದೇಲಂಪಾಡಿ ಪ್ರವಚನ ನೀಡಲಿದ್ದಾರೆ.

ಶಾಸಕರುಗಳಾದ ಯು.ಟಿ.ಖಾದರ್, ಎಕೆಎಂ ಅಶ್ರಫ್, ಮಾಜಿ ಸಚಿವ ಸಿ.ಎಂ.ಇಬ್ರಾಹಿಂ, ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ, ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ರಾಜೀವ್ ಗಾಂಧಿ ವಿವಿಯ ಸಿಂಡಿಕೇಟ್ ಸದಸ್ಯ ಡಾ.ಇಫ್ತಿಕಾರ್ ಅಲಿ, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ ಮುಂತಾದವರು ಭಾಗವಹಿಸಲಿದ್ದಾರೆ.

ಸೆ.24ರಂದು ಸ್ವಲಾತ್ ವಾರ್ಷಿಕ ನಡೆಯಲಿದ್ದು, ಸೈಯದ್ ಝೈನುಲ್ ಆಬಿದೀನ್ ಜಮಾಲುಲ್ಲೈಲ್ ತಂಙಳ್ ಕಾಜೂರು ನೆರವೇರಿಸಲಿದ್ದಾರೆ.

ಸೆ.25ರಂದು ದ್ಸಿಕ್ರ್ ಮಜ್ಸಿಸ್ ಮೌಲಿದ್ ಪಾರಾಯಣ, ಅನುಸ್ಮರಣೆ ಹಾಗೂ ಅನ್ನದಾನ ನಡೆಯಲಿದೆ. ಸೈಯದ್ ಖರ್ರತುಸ್ಸಾದಾತ್ ಕೂರತ್ ತಂಙಳ್, ಸೈಯದ್ ಆಟಕೋಯ ತಂಙಳ್ ಕುಂಬೋಳ್, ಡಾ.ಮುಹಮ್ಮದ್ ಪಾಝಿಲ್ ರಝ್ವಿ ಹಝ್ರತ್ ಕಾವಲ್ಕಟ್ಟೆ, ಸೈಯದ್ ಸಾದಾತ್ ತಂಙಳ್ ಪಡ್ಡಂತಡ್ಕ ಭಾಗವಹಿಸಲಿದ್ದಾರೆ. ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಪ್ರವಚನ ನೀಡಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಸೀದಿಯ ಅಧ್ಯಕ್ಷ ಅಬ್ಬಾಸ್ ಕೆ., ಉಪಾಧ್ಯಕ್ಷ ಅಬ್ಬಾಸ್ ಜಲೀಲ್, ಹನೀಫ್ ಚಂದಹಿತ್ಲು, ಪ್ರಚಾರ ಸಮಿತಿಯ ಅಧ್ಯಕ್ಷ ರಹಿಮಾನ್ ಚಂದಹಿತ್ಲು, ಅಬ್ಬಾಸ್ ಖಾದರ್ ಕಟ್ಟೆಪುಣಿ, ಜೊತೆ ಕಾರ್ಯದರ್ಶಿಗಳಾದ ಅಬ್ದುಲ್ ಹಮೀದ್ ಎಂ.ಎಚ್., ಅಝರ್, ಆಲಿಕುಂಞಿ, ಮರಿಕ್ಕಳ ಮಸೀದಿಯ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ, ಮುಹಮ್ಮದ್ ಸಖಾಫಿ ಪೂಡಲ್, ಬಶೀರ್ ಮಜಲ್, ಮುಹಮ್ಮದ್ ಬೆರೆ, ಅಬ್ಬಾಸ್ ನಿಡ್ಮಾಡ್, ಶೇಕಬ್ಬ ಬರೆಬಾಯಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News