ಇಂಗ್ಲಿಷ್ ಭಾಷೆಯಲ್ಲಿ ಯಕ್ಷಗಾನ ‘ಪಾಂಡವಾಶ್ವಮೇಧಂ’ ಪ್ರದರ್ಶನ

Update: 2022-09-20 15:49 GMT

ಕಾಸರಗೋಡು, ಸೆ.20: ಭಾರತೀಯ ರಿಸರ್ವ್ ಬ್ಯಾಂಕಿನ ರಾಷ್ಟ್ರ ಮಟ್ಟದ ಎಫ್‌ಐಡಿಡಿ.ಸಮ್ಮೇಳನವು ಇತ್ತೀಚೆಗೆ ಬೇಕಲದ ತಾಜ್ ರೆಸಾರ್ಟ್‌ನಲ್ಲಿ ನಡೆಯಿತು.

ಈ ಸಂದರ್ಭ ಮಂಗಳೂರಿನ ತೋನ್ಸೆ ಯಕ್ಷಬಳಗದಿಂದ ಇಂಗ್ಲಿಷ್ ಭಾಷೆಯಲ್ಲಿ ’ಪಾಂಡವಾಶ್ವಮೇಧಂ’ ತೆಂಕುತಿಟ್ಟು  ಯಕ್ಷಗಾನವನ್ನು ಪ್ರದರ್ಶಿಸಲಾಯಿತು. ಶ್ಯಾಡ್ಸ್ ಈವೆಂಟ್ಸ್ ಅವರ ಸಂಯೋಜನೆಯಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರು ಭಾಗವಹಿಸಿದ್ದರು.

ಭಾಗವತರಾಗಿ ತೋನ್ಸೆ ಪುಷ್ಕಳ ಕುಮಾರ್, ಹಿಮ್ಮೇಳದಲ್ಲಿ ಶರತ್ ಕುಮಾರ್ ಕದ್ರಿ, ಸುದಾಸ್ ಕಾವೂರು ಮತ್ತು ಹರಿಶ್ಚಂದ್ರ ನಾಯಗ ಮಾಡೂರು ಸಹಕರಿಸಿದರು. ಪಾತ್ರಧಾರಿಗಳಾಗಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ, ರವಿ ಅಲೆವೂರಾಯ ವರ್ಕಾಡಿ, ಡಾ.ದಿನಕರ ಎಸ್. ಪಚ್ಚನಾಡಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News