ನಿಯಮ ಉಲ್ಲಂಘನೆ ಆರೋಪ: 'ಸೈಮಾ ಅವಾರ್ಡ್' ಆಯೋಜಕರ ವಿರುದ್ಧ FIR ದಾಖಲು

Update: 2022-09-21 11:30 GMT

ಬೆಂಗಳೂರು, ಸೆ.21- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದ್ದ ಸೈಮಾ ಅವಾರ್ಡ್ 2022 (ದಕ್ಷಿಣ ಭಾರತದ ಅಂತರರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ)  ಬಳಿಕ ಆಯೋಜಿಸಿದ್ದ ಅದ್ದೂರಿ ಪಾರ್ಟಿಯ ಆಯೋಜಕರ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಪ್ರತಿಷ್ಠಿತ ಜೆಡಬ್ಲ್ಯೂ ಹೋಟೆಲ್‌ನಲ್ಲಿ ಈ ಪಾರ್ಟಿ ನಡೆದಿದ್ದು ಕಾನೂನು ಉಲ್ಲ‌ಂಘಿಸಿ  ರಾತ್ರಿ 3.30 ಗಂಟೆಯ ವರೆಗೂ ಪಾರ್ಟಿ ಆಯೋಜಿಸಲಾಗಿತ್ತು.ಈ ಸಂಬಂಧಿಸಿದಂತೆ ಆಯೋಜಕರ ವಿರುದ್ಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾರ್ಟಿಯಲ್ಲಿ ವಿವಿಧ ಭಾಷೆಯ ನಟ - ನಟಿಯರು ಭಾಗಿಯಾಗಿದ್ದರು. ರಾತ್ರಿ 3.30ರ ತನಕ ಅಬ್ಬರದ ಸಂಗೀತಕ್ಕೆ ಹೆಜ್ಜೆ ಹಾಕಿದ್ದರು. ಜತೆಗೆ ರಾಕಿಂಗ್ ಸ್ಟಾರ್ ಯಶ್ ಹಾಗೂ ಅಭಿಷೇಕ್ ಅಂಬರೀಶ್ ಅವರು ಪಾರ್ಟಿಯಲ್ಲಿದ್ದ ವಿಡಿಯೊ ಒಂದು ವೈರಲ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News