ಮೊಂಟೆಪದವು: ಬೇಕಲ್ ಉಸ್ತಾದ್ ಆಂಡ್ ನೇರ್ಚೆಗೆ ಚಾಲನೆ

Update: 2022-09-21 17:13 GMT

ಕೊಣಾಜೆ: ಬೇಕಲ ಉಸ್ತಾದ್ ಧಾರ್ಮಿಕ ಶಿಕ್ಷಣ ಕೇಂದ್ರ ಅಭಿವೃದ್ಧಿಗೆ ಬಹಳಷ್ಟು ಶ್ರಮ ವಹಿಸಿದವರು. ಪ್ರವಾದಿಯವರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬಂದವರು. ಅದೇ ದಾರಿಯಲ್ಲಿ ನಮ್ಮ ಜೀವನ ಸಾಗಬೇಕಾಗಿದೆ. ಪ್ರವಾದಿಯವರನ್ನು ಪ್ರೀತಿಸಿ ಅವರ ಬದುಕಿನ ಹಾದಿಯನ್ನು ನಾವು ಅನುಸರಿಸಲು ಧಾರ್ಮಿಕ ಗ್ರಂಥಗಳ ಅಧ್ಯಯನ ಮಾರ್ಗ ದರ್ಶನ ಆಗಿರುತ್ತದೆ  ಎಂದು ಮರಿಕ್ಕಳ ಜುಮಾ ಮಸೀದಿ ಮುದರ್ರಿಸ್  ಅಬ್ಬಾಸ್ ಸಖಾಫಿ ಅಲ್ ಫುರ್ಖಾನಿ  ಹೇಳಿದರು.

ಅವರು ಮರಿಕ್ಕಳ ಜುಮಾ ಮಸೀದಿ ಮೊಂಟೆಪದವು ಇದರ ಆಶ್ರಯದಲ್ಲಿ ಶೈಖುನಾ ತಾಜುಲ್ ಫುಖಹಾಹ್ ಬೇಕಲ ಉಸ್ತಾದ್ ರವರ ಎರಡನೇ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಬೇಕಲ್ ಉಸ್ತಾದರ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ಚೆಯರ್ ಮ್ಯಾನ್ ಅಬ್ದುಲ್ ಜಲೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಲ್ ಮದೀನಾ ಮುದರ್ರಿಸ್ ಮುಹಮ್ಮದ್ ಕುಂಞಿ ಅಮ್ಜದಿ ಸಂದೇಶ ಭಾಷಣ ಮಾಡಿದರು. ಅಬ್ಬಾಸ್ ಸಖಾಫಿ  ಪೂಡಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮರಿಕ್ಕಳ ಮುಅಲ್ಲಿಂ ಗಳಾದ ಝೈನುಲ್ ಆಬಿದ್ ಸಖಾಫಿ, ಅಬ್ದುಲ್ ಜಬ್ಬಾರ್ ಸಅದಿ, ಕೋಶಾಧಿಕಾರಿ ಹನೀಫ್ ಚಂದಹಿತ್ಲು, ಕಾರ್ಯ ದರ್ಶಿ ಅಬ್ದುಲ್ ಹಮೀದ್,ಅಝರುದ್ದೀನ್, ಸ್ವಾಗತ ಸಮಿತಿ ಕನ್ವಿನರ್ ಆಲಿಕುಂಞಿ ಮೋಂಟುಗೋಳಿ, ಮರಿಕ್ಕಳ ಎಸ್ ಎಸ್ ಎಫ್ ಅಧ್ಯಕ್ಷ ಮಜೀದ್ ಎಂ.ಎಚ್, ಬಶೀರ್ ಮಜಲ್ ಮತ್ತಿತರರು ಉಪಸ್ಥಿತರಿದ್ದರು.

ಮಸೀದಿ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News