PayCm, PayExCM ಅಲ್ಲ. ಇದು 'PayTeam': ಎಎಪಿಯಿಂದಲೂ ಕ್ಯೂಆರ್‌ ಕೋಡ್‌ ಮಾದರಿ ಪೋಸ್ಟರ್‌ ಬಿಡುಗಡೆ!

Update: 2022-09-22 05:08 GMT

ಬೆಂಗಳೂರು, ಸೆ.22: ಪೇಟಿಎಂ ಕ್ಯೂಆರ್‌ ಕೋಡ್‌ ಮಾದರಿಯಲ್ಲಿ ಕಾಂಗ್ರೆಸ್‌ ರಚಿಸಿದ 'ಪೇಸಿಎಂ' ಪೋಸ್ಟರ್‌ ವೈರಲ್‌ ಆದ ಬೆನ್ನಲ್ಲೇ ಆಮ್‌ ಆದ್ಮಿ ಪಾರ್ಟಿ(AAP) ಕೂಡ ಕ್ಯೂಆರ್‌ ಕೋಡ್‌ ಮಾದರಿಯ ಪೋಸ್ಟರ್‌ ತಯಾರಿಸಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳಿಗೆ ಟಕ್ಕರ್‌ ಕೊಟ್ಟಿದೆ.

ಸಿಎಂ ಬಸವರಾಜ ಬೊಮ್ಮಾಯಿಯವರಿದ್ದ 'ಪೇಸಿಎಂ' ಕ್ಯೂಆರ್‌ ಕೋಡ್‌ ಹಾಗೂ ಬಿಜೆಪಿಯವರು ಬಿಡುಗಡೆ ಮಾಡಿದ್ದ 'ಪೇ ಎಕ್ಸ್‌ ಸಿಎಂ' ಕ್ಯೂಆರ್‌ ಕೋಡ್‌ ಜೊತೆಗೆ ಜೆಡಿಎಸ್‌ ಚಿಹ್ನೆ ಕ್ಯೂಆರ್‌ ಕೋಡನ್ನೂ ಸೇರಿಸಿ ಆಮ್‌ ಆದ್ಮಿ ಪಾರ್ಟಿಯು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ.

“ಇದು PayCm, PayExCM ಅಲ್ಲ, ಇದು ಜೆಸಿಬಿ ಪಾರ್ಟಿಗಳ PayTeam. ಜೆಡಿಎಸ್‌ 10%, ಕಾಂಗ್ರೆಸ್‌ 20% ಹಾಗೂ ಬಿಜೆಪಿ 40% ಲೂಟಿ ಮಾಡಿದೆ. ಮೂರೂ ಪಕ್ಷಗಳ ಟೀಂ ರಾಜ್ಯವನ್ನು ಲೂಟಿ ಮಾಡಿದೆ. ಇದರಿಂದ ಜನಸಾಮಾನ್ಯರಿಗೆ ಉಳಿದಿದ್ದು ಮೂರು ನಾಮ”ಎಂದು ಆಮ್‌ ಆದ್ಮಿ ಪಾರ್ಟಿಯು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ PAYCM ಪೋಸ್ಟರ್ ಪ್ರಕರಣ: ಹಲವು ಕಾಂಗ್ರೆಸ್ ಕಾರ್ಯಕರ್ತರು ವಶಕ್ಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News