ಬಿಎಂಟಿಸಿ 1,324 ಕೋಟಿ ರೂ. ಸಾಲ ಪಡೆದಿದೆ: ಸಚಿವ ಶ್ರೀರಾಮುಲು

Update: 2022-09-23 12:05 GMT

ಬೆಂಗಳೂರು, ಸೆ.23: ಕಳೆದ 5 ವರ್ಷಗಳ ಅವಧಿಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) 1324.90 ಕೋಟಿ ರೂ. ಸಾಲ ಪಡೆದಿದ್ದು, ಈ ಪೈಕಿ 679 ಕೋಟಿ ರೂ.ಗಳನ್ನು ಮರು ಪಾವತಿ ಮಾಡಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ಶುಕ್ರವಾರ ವಿಧಾನ ಪರಿಷತ್ತಿನಲ್ಲಿ ಗೋವಿಂದರಾಜು ಪರವಾಗಿ ಯು.ಬಿ. ವೆಂಕಟೇಶ್ ಕೇಳಿದ ಪ್ರಶ್ನೆಗೆ ಉತ್ತರಿಸಿ, ಬಾಕಿ ಇರುವ 665 ಕೋಟಿ ರೂ. ಸಾಲ ತೀರಿಸಿ ಬಿಎಂಟಿಸಿಯನ್ನು ಲಾಭದಾಯಕವನ್ನಾಗಿ ಮಾಡಲು ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರತಿನಿತ್ಯ ಬಿಎಂಟಿಸಿಯಲ್ಲಿ 6-7 ಕೋಟಿ ರೂ. ಮೌಲ್ಯದ ಡಿಸೇಲ್ ಖರೀದಿಸಲಾಗುತ್ತಿದೆ. ಒಟ್ಟಾರೆ 4 ನಿಗಮಗಳಿಂದ ಪ್ರತಿನಿತದ್ಯ 15 ಕೋಟಿ ರೂ. ಡಿಸೇಲ್ ಖರೀದಿಗಾಗಿಯೇ ಬಳಕೆ ಮಾಡಲಾಗುತ್ತಿದೆ. ಹೀಗಾಗಿ ಸರಕಾರ ಎಲೆಕ್ಟ್ರಿಕಲ್ ವಾಹನ ಖರೀದಿಗೆ ಮುಂದಾಗಿದೆ. ಜತೆಗೆ ಹಳೆಯ ಬಸ್‍ಗಳನ್ನು ಆಧುನೀಕರಣ ಮಾಡಲಾಗುತ್ತಿದೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News