ನಗರದ ಸುಗಮ ಸಂಚಾರಕ್ಕೆ ‘ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ' ಮಂಡನೆ

Update: 2022-09-23 14:04 GMT

ಬೆಂಗಳೂರು, ಸೆ. 23: ‘ಬೆಂಗಳೂರು ನಗರದಲ್ಲಿನ ಸುಗಮ ಸಂಚಾರ, ಸಂಚಾರದ ಅಭಿವೃದ್ಧಿ, ಕಾರ್ಯಾಚರಣೆ, ನಿರ್ವಹಣೆ, ಮೇಲುಸ್ತುವಾರಿ, ಮೇಲ್ವಿಚಾರಣೆಗಾಗಿ ‘ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ-2022' ಅನ್ನು ಮಂಡನೆ ಮಾಡಲಾಗಿದೆ.

ಶುಕ್ರವಾರ ವಿಧಾನಸಭೆಯಲ್ಲಿ ಬಿಎಂಎಸ್ ಟ್ರಸ್ಟ್ ಅಕ್ರಮ ತನಿಖೆಗೆ ಆಗ್ರಹಿಸಿ ಜೆಡಿಎಸ್ ಸದಸ್ಯರ ಧರಣಿ, ಗದ್ದಲದ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧೇಯಕವನ್ನು ಮಂಡಿಸಿದರು.

ಬಿಡಿಎ, ಮಹಾನಗರ ವಲಯ ಅಭಿವೃದ್ಧಿ ಪ್ರಾಧಿಕಾರ, ಸಂಚಾರ ಪೊಲೀಸ್, ಬಿಎಂಟಿಸಿ, ಬಿಬಿಎಂಪಿ, ಮೆಟ್ರೋ ರೈಲು ಇನ್ನು ಮುಂದೆ ಒಂದೇ ಸೂರಿನಡಿ ನಿರ್ವಹಣಾ ಚಟುವಟಿಕೆಗಳನ್ನು ನಡೆಸಲಿವೆ.

ನಗರ ಸಂಚಾರವನ್ನು ಸುಗಮಗೊಳಿಸುವ ಮತ್ತು ಉತ್ತಮಪಡಿಸುವ ನಿಟ್ಟಿನಲ್ಲಿ ಅನುಷ್ಠಾನಗೊಳಿಸಲು ಹಿಂದಿನ ಪದ್ಧತಿಯಿಂದ ಅಡ್ಡಿಯುಂಟಾಗುತ್ತಿತ್ತು. ರಾಷ್ಟ್ರೀಯ ನಗರ ಸಾರಿಗೆ ನೀತಿಯನ್ನು ಸಶಕ್ತಗೊಳಿಸಲು ಸಂಸ್ಥೆಗಳು ಹಾಗೂ ವಿವಿಧ ಇಲಾಖೆಯನ್ನು ಒಂದೇ ಸೂರಿನಡಿ ತರಬೇಕೆಂಬ ಗುರಿ ಹೊಂದಲಾಗಿದೆ. ಅಲ್ಲದೆ, ಆರ್ಥಿಕತೆ, ಮೂಲಸೌಕರ್ಯ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಮಾರುಕಟ್ಟೆಗಳ ಸ್ಥಾಪನೆ ನಿರ್ವಹಣೆ, ಪರಿಸರ ಸಂರಕ್ಷಣೆ ಉತ್ತೇಜನ ನೀಡುವಲ್ಲಿ ಪ್ರಭಾವ ಬೀರುವ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಂಸ್ಥೆಗಳ ನೀತಿ, ಕಾರ್ಯಕ್ರಮಗಳನ್ನು ಏಕರೂಪಗೊಳಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News