×
Ad

ಸಾಮಾಜಿಕ ಜಾಲತಾಣಗಳಲ್ಲಿ ಹೆಸರು ದುರ್ಬಳಕೆ‌: ಮುಲ್ಕಿ-ಮೂಡುಬಿದಿರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷರಿಂದ ದೂರು

Update: 2022-09-24 12:17 IST

ಬಜ್ಪೆ, ಸೆ.24: ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೆಸರು ದುರ್ಬಳಕೆ‌ ಮಾಡಲಾಗಿದೆ ಎಂದು ಆರೋಪಿಸಿ ಮುಲ್ಕಿ- ಮೂಡುಬಿದಿರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ನಿಸಾರ್‌ ಕರಾವಳಿ ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಾರೆ.

ಶುಕ್ರವಾರ ರಾತ್ರಿ ಪೊಲೀಸರಿಗೆ ದೂರಿ ನೀಡಿರುವ ಅವರು,‌ ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯವಾಗಿ ನನ್ನ ಏಳಿಗೆಯನ್ನು ನೋಡಲು ಆಗದ ಕೆಲವು ಕಿಡಿಗೇಡಿಗಳು ನನ್ನ ಹೆಸರನ್ನು ಹಾಕಿ ಕೆಲವು ಲೇಖನಗಳನ್ನು ಬರೆದು ಸಾಮಾಜಿಕ‌ ಜಾಲತಾಣಗಳಲ್ಲಿ ಹಂಚುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ನನ್ನ ತೇಜೋವಧೆ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ‌ ಕೈಗೊಳ್ಳಬೇಕೆಂದು ಮುಲ್ಕಿ ಮೂಡುಬಿದಿರೆ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ ದೂರಿನಲ್ಲಿ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News