ವಿರೋಧದ ನಡುವೆ ಬೆಂಗಳೂರು ವಿವಿ ಆವರಣದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಿಂಡಿಕೇಟ್‍ ಸಭೆಯಲ್ಲಿ ಒಪ್ಪಿಗೆ

Update: 2022-09-24 15:24 GMT

ಬೆಂಗಳೂರು, ಸೆ.24: ಬೆಂಗಳೂರು ವಿವಿ ಆವರಣದಲ್ಲಿ ದೇವಾಲಯ ನಿರ್ಮಾಣ ಮಾಡುವ ಕುರಿತು ಸಿಂಡೀಕೇಟ್ ಸಭೆಯಲ್ಲಿ ನಿರ್ಧಾರವಾಗಿದ್ದು, ದೇವಾಲಯ ನಿರ್ಮಾಣ ಮಾಡಲು ಸೂಕ್ತ ಸ್ಥಳವನ್ನು ಸೂಚಿಸಲು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಲು ಕುಲಸಚಿವರ ಅಧ್ಯಕ್ಷತೆಯಲ್ಲಿ ನಿಯೋಗವನ್ನು ರಚನೆ ಮಾಡಲಾಗಿದೆ. 

ಕೆಲದಿನಗಳ ಹಿಂದೆ ದೇವಸ್ಥಾನವನ್ನು ನಿರ್ಮಾಣ ಮಾಡದಂತೆ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ನಡೆಸಿದ್ದರು. ಪೋಲೀಸ್ ಆಯುಕ್ತರಿಗೂ ದೂರ ದಾಖಲಿದ್ದರು. ವಿವಿಯಲ್ಲಿ ದೇವಾಸ್ಥಾನವನ್ನು ನಿರ್ಮಾಣ ಮಾಡದೆ ಅಂಬೇಡ್ಕರ್ ಅವರ ಆಶಯದಂತೆ ಗ್ರಂಥಾಲಯವನ್ನು ನಿರ್ಮಿಸುವಂತೆ ಸರಕಾರವನ್ನು ಒತ್ತಾಯಿಸಿದ್ದರು. ಆದರೆ ವಿವಿ ಆವರಣದಲ್ಲಿ ದೇವಾಸ್ಥಾನ ನಿರ್ಮಾಣ ಮಾಡುವುದರ ಕುರಿತು ಸಿಂಡೀಕೇಟ್ ಸಭೆಯಲ್ಲಿ ಚರ್ಚೆ ನಡೆದಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಗೆ ಹಿನ್ನಡೆಯಾಗಿದೆ. 

ವಿದ್ಯಾರ್ಥಿಗಳ ಬೇಡಿಕೆಯನ್ನು ಬದಿಗೊತ್ತಿ, ಗಣಪತಿ ದೇವಾಸ್ಥಾನವನ್ನು ನಿರ್ಮಿಸಲು ಸಿಂಡಿಕೇಟ್‍ಗೆ ಯಾವುದೇ ಅಭ್ಯಂತರವಿಲ್ಲ. ದೇವಾಸ್ಥಾನದ ನಿರ್ವಹಣೆಯನ್ನು ವಿವಿಯ ಆಡಳಿತದಿಂದಲೇ ನಿರ್ವಹಿಸಬೇಕು ಎಂದು ಬೆಂಗಳೂರು ವಿವಿಯ ಸಿಂಡಿಕೇಟ್ ನಿರ್ಧಾರ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಬೆಂಗಳೂರು ವಿವಿಯ ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರರು ದೇವಸ್ಥಾನ ನಿರ್ಮಾಣ ಮಾಡದಂತೆ ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. ಈ ಆಕ್ಷೇಪಣೆಗಳನ್ನು ಬಿಬಿಎಂಪಿಗೆ ಪತ್ರದ ಮೂಲಕ ಕಳುಹಿಸಿದ್ದರೂ, ಬಿಬಿಎಂಪಿ ಅಧಿಕಾರಿಗಳು ನಿರಾಕರಿಸಿದ್ದಾರೆ ಬೆಂಗಳೂರು ವಿವಿಯ ಕುಲಸಚಿವರು ಸಿಂಡಿಕೇಟ್ ಸಭೆಯಲ್ಲಿ ಚರ್ಚಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News