ಚಂಡೀಗಢ ವಿದ್ಯಾರ್ಥಿನಿ ಖಾಸಗಿ ವಿಡಿಯೋ ಸೋರಿಕೆ ಪ್ರಕರಣ:‌ ಸೇನಾ ಸಿಬ್ಬಂದಿಯ ಬಂಧನ

Update: 2022-09-24 16:11 GMT
ಚಂಡೀಗಢ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯರಿಂದ ಪ್ರತಿಭಟನೆ (File Photo: PTI)

ಚಂಡೀಗಢ: ಮೊಹಾಲಿಯ ಚಂಡೀಗಢ ವಿಶ್ವವಿದ್ಯಾನಿಲಯದ(Chandigarh University) ಹಾಸ್ಟೆಲ್ ವಿದ್ಯಾರ್ಥಿನಿಯ ಖಾಸಗಿ ವಿಡಿಯೋ ಸೋರಿಕೆ(Video Leak) ಪ್ರಕರಣದಲ್ಲಿ, ಆಕೆಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದಲ್ಲಿ ಪಂಜಾಬ್ ಪೊಲೀಸರು ಶನಿವಾರ ಅರುಣಾಚಲ ಪ್ರದೇಶದಲ್ಲಿ ಸೇನಾ ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಹಿಮಾಚಲ ಪ್ರದೇಶದ ವಿದ್ಯಾರ್ಥಿನಿ ಸಹಿತ ಮೂವರನ್ನೂ ಈಗಾಗಲೇ ಬಂಧಿಸಲಾಗಿತ್ತು.

ಕಳೆದ ಶನಿವಾರ ಈ ವಿಷಯ ಬೆಳಕಿಗೆ ಬಂದ ನಂತರ ಚಂಡೀಗಢದ ಖಾಸಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು.

ಬಂಧಿತ ಇತರ ಆರೋಪಿಗಳಿಂದ ವಶಪಡಿಸಿಕೊಂಡ ಎಲೆಕ್ಟ್ರಾನಿಕ್‌ ಸಾಧನಗಳಿಂದ "ವಿಧಿವಿಜ್ಞಾನ ಮತ್ತು ಡಿಜಿಟಲ್ ಸಾಕ್ಷ್ಯಗಳನ್ನು" ಪತ್ತೆಹಚ್ಚಿದ ನಂತರ ಮೊಹಾಲಿಯ ಪೊಲೀಸ್ ತಂಡವು ಯೋಧ ಸಂಜೀವ್ ಸಿಂಗ್‌ನನ್ನು ಬಂಧಿಸಿದೆ ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥ ಗೌರವ್ ಯಾದವ್ ತಿಳಿಸಿದ್ದಾರೆ.

ಇತರ ಹುಡುಗಿಯರ ವಿಡಿಯೋಗಳು ವೈರಲ್‌ ಆಗಿವೆ ಎಂಬ ವದಂತಿಗಳು ಬಾರೀ ಪ್ರತಿಭಟನೆಗೆ ಉತ್ತೇಜನ ನೀಡಿದ್ದವು, ಆದರೆ ಬಂಧಿತ ಹುಡುಗಿ ತನ್ನ ವೀಡಿಯೊವನ್ನು ಸ್ನೇಹಿತರಿಗೆ ಕಳುಹಿಸಿರುವುದಾಗಿ ತಿಳಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಬಳಿಕ, ಪ್ರಕರಣದ ಜಾಲದ ಬೆನ್ನು ಬಿದ್ದಿರುವ ಪೊಲೀಸರು, ವೀಡಿಯೊಗಳನ್ನು ರೆಕಾರ್ಡ್ ಮಾಡಲು ಮತ್ತು ಹಂಚಿಕೊಳ್ಳಲು ಅವಳನ್ನು ಬ್ಲ್ಯಾಕ್‌ಮೇಲ್ ಮಾಡಲಾಗಿದೆಯೇ ಎಂದು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ವಿಧಾನಸಭೆಯಲ್ಲಿ ಇಸ್ಪೀಟ್ ಆಡಿದ, ತಂಬಾಕು ಜಗಿದ ಬಿಜೆಪಿ ಶಾಸಕರು: ಆರೋಪ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News