×
Ad

ಕೆಪಿಸಿಸಿಯ ರಾಜ್ಯ ವಕ್ತಾರರಾಗಿ ಅಮಳ ರಾಮಚಂದ್ರ ನೇಮಕ

Update: 2022-09-25 22:14 IST

ಪುತ್ತೂರು: ಕೆಪಿಸಿಸಿಯ ರಾಜ್ಯ ವಕ್ತಾರಾಗಿ  ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವಕ್ತಾರರಾದ ಅಮಳ ರಾಮಚಂದ್ರ  ಅವರನ್ನು ನೇಮಕಗೊಳಿಸಲಾಗಿದೆ.  ಕಾಂಗ್ರೆಸ್ ಸಂವಹನ ಹಾಗೂ ಸಾಮಾಜಿಕ ಜಾಲತಾಣದ ರಾಜ್ಯಅಧ್ಯಕ್ಷ ಪ್ರಿಯಾಂಕ್ ಖರ್ಗೆ ನೇಮಕ ಗೊಳಿಸಿ ಆದೇಶಿಸಿದ್ದಾರೆ.

ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರ ಕೋರಿಕೆಯಂತೆ ಕೆಪಿಸಿಸಿಯ ಪ್ರದಾನ ಕಾರ್ಯದರ್ಶಿ ಹಾಗೂ ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಗಳಾಗಿರುವ ರಕ್ಷಿತ್ ಶಿವರಾಮ್ ರವರ ಶಿಫಾರಸ್ಸಿನ ಮೇರೆಗೆ ಕೆಪಿಸಿಸಿ ಡಿ ಕೆ ಶಿವಕುಮಾರ್ ರವರು ಅನುಮೋದನೆಯಂತೆ ಈ ನೇಮಕಾತಿ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News