ಕಿನ್ಯ ರೇಂಜ್; ರಬೀಹ್ ಕ್ಯಾಂಪೈನ್ ಉದ್ಘಾಟನೆ ಸಮಾರಂಭ

Update: 2022-09-26 04:44 GMT

ಉಳ್ಳಾಲ: ಕಿನ್ಯ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ ಮೆಂಟ್ ವತಿಯಿಂದ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 26 ತನಕ 'ರಬೀಹ್ ಕ್ಯಾಂಪೈನ್' ನಡೆಯಲಿದೆ. 

ಒಂದು ತಿಂಗಳ ಕಾಲ ನಡೆಯಲಿರುವ ಈ  ಕಾರ್ಯಕ್ರಮಕ್ಕೆ ಬಹುಃ ಅಮೀರ್ ತಂಙಳ್ ಕಿನ್ಯ, ಅಬ್ದುಲ್ ಖಾದರ್ ಅಲ್ ಖಾಸಿಮಿ ಪೆರಳ್ ಉಸ್ತಾದ್,ಮಜೀದ್ ದಾರಿಮಿ ತೋಡಾರ್ ಮುಫತ್ತಿಷ್ ಅಬ್ದುಲ್ ಹಮೀದ್ ದಾರಿಮಿ, ರಿಯಾಝ್ ರಹ್ಮಾನಿ ಕಿನ್ಯ ಅವರ ನೇತೃತ್ವದೊಂದಿಗೆ MT ಮಹಳ್‌ನಲ್ಲಿ ಚಾಲನೆ ನೀಡಲಿದ್ದಾರೆ. 

ಈ ಕಾರ್ಯಕ್ರಮದಲ್ಲಿ ರೇಂಜ್‌ ನೇತಾರರಾದಂತಹ ಅಬ್ದುಲ್ ಲತೀಫ್ ದಾರಿಮಿ, ಮುಸ್ತಫಾ ಫೈಝಿ, ಅಬ್ದುಲ್ ಅಝೀಝ್ ಅಸ್ಲಮಿ, ಅಬೂಬಕ್ಕರ್ ದಾರಿಮಿ ಹಾಗೂ ಇತರ ರೇಂಜ್ ಮುಅಲ್ಲಿಮರು ಭಾಗವಹಿಸಲಿದ್ದಾರೆ ಎಂದು ರೇಂಜ್ ಪ್ರ.ಕಾರ್ಯದರ್ಶಿ ಮುಸ್ತಫಾ ಫೈಝಿ ಪತ್ರಿಕೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News