ಎಸ್ಕೆಎಸ್ಸೆಸ್ಸೆಫ್ ಚೊಕ್ಕಬೆಟ್ಟು ಕ್ಲಸ್ಟರ್ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ

Update: 2022-09-26 17:14 GMT

ಸುರತ್ಕಲ್, ಸೆ.26: ಎಸ್ಕೆಎಸ್ಸೆಸ್ಸೆಫ್ ಚೊಕ್ಕಬೆಟ್ಟು ಕ್ಲಸ್ಟರ್ ಆಶ್ರಯದಲ್ಲಿ ವಿಖಾಯ ಡೇ ಪ್ರಯುಕ್ತ ಶ್ರೀನಿವಾಸ ಆಸ್ಪತ್ರೆ ಮುಕ್ಕ ಇವರ ಸಹಯೋಗದಲ್ಲಿ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರ ಮತ್ತು ಎಸೆಸೆಲ್ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರವಿವಾರ ಚೊಕ್ಕಬೆಟ್ಟು ಸರಕಾರಿ ಶಾಲೆಯ ವಠಾರದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಸೂರಿಂಜೆ ಎಂ.ಜೆ.ಎಂ‌ ಮಸೀದಿಯ ಮುದರ್ರಿಸ್ ಅಲ್ ಹಾಜಿ ಇಸ್ಮಾಯಿಲ್ ಫೈಝಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್  ಚೊಕ್ಕಬೆಟ್ಟು ಕ್ಲಸ್ಟರ್ ಅಧ್ಯಕ್ಷ ಐ. ಬಿ. ಇಂಮ್ತಿಯಾಝ್ ಅಹ್ಮದ್ ಇಡ್ಯಾ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಎಸ್ಕೆಎಸ್ಸೆಸ್ಸೆಫ್  ಹಾಗೂ ವಿಖಾಯದ ಕಾರ್ಯವೈಖರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವಿಖಾಯ ದ.ಕ. ಜಿಲ್ಲಾ ವೆಸ್ಟ್ ಕಾರ್ಯದರ್ಶಿ ಸಿದ್ದಿಕ್ ಅಬ್ದುಲ್ ಖಾದರ್ ಬಂಟ್ವಾಳ ಅವರು ಸಂಘಟನೆಯ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು. ಇದೇ ಸಂದರ್ಭ ಕಳೆದ ಶೈಕ್ಷಣಿಕ ಸಾಲಿನ ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕಗಳಿಸಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ‌ ಚೊಕ್ಕಬೆಟ್ಟು ಎಂಜೆಎಂ ಜುಮಾ‌ ಮಸೀದಿಯ ಅಧ್ಯಕ್ಷ ಟಿ. ಬಶೀರ್, ಎಸ್ಕೆಎಸ್ಸೆಸ್ಸೆಫ್  ಸುರತ್ಕಲ್‌ವಲಯಾಧ್ಯಕ್ಷ  ಇಲ್ಯಾಸ್, 6ನೇ ವಿಭಾಗ ಕೃಷ್ಣಾಪುರ ತೈಬಾ ಮಸೀದಿಯ ಅಧ್ಯಕ್ಷ ಅಬ್ದುಲ್ ಹಮೀದ್ ತಾಜ್ ಫಿಶ್, ಇಡ್ಯಾ ಖಿಲ್ರಿಯಾ ಮಸೀದಿಯ ಅಧ್ಯಕ್ಷ ಇಲ್ಯಾಸ್, ಸೂರಿಂಜೆ ಜುಮಾ ಮಸೀದಿಯ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್, ಚೊಕ್ಕಬೆಟ್ಟು ತರ್ಬಿಯತುಲ್ ಮಾಸಾಕಿನ್ ಅಧ್ಯಕ್ಷ ಶರೀಫ್ ಚೊಕ್ಕಬೆಟ್ಟು,  ಚೊಕ್ಕಬೆಟ್ಟು ಎಸ್‌ವೈಎಸ್‌ ಅಧ್ಯಕ್ಷ  ಟಿ. ಮುಹಮ್ಮದ್, ಉಪಾಧ್ಯಕ್ಷ ಐ. ಅಬೂಬಕ್ಕರ್ ಇಡ್ಯಾ, ಚೊಕ್ಕಬೆಟ್ಟು ಯುನೈಟೆಡ್ ಗ್ಲೋಬಲ್‌ಫಾರಂ ಅಧ್ಯಕ್ಷ ಇಬ್ರಾಹಿಂ, ಎಸ್ಕೆಎಸ್ಸೆಸ್ಸೆಫ್ ವಲಯ ಸಹಚಾರಿ ಕಾರ್ಯದರ್ಶಿ ಅಬ್ಬಾಸ್ ಉಸ್ತಾದ್, ಅಶ್ರಫ್ ಸೂರಿಂಜೆ, ಹನೀಫ್ ಇಡ್ಯಾ, ವಿಖಾಯ ಕಾರ್ಯದರ್ಶಿ ಗಳಾದ ಝಫಾರುಲ್ಲ ಕೃಷ್ಣಾಪುರ ಹಾಗೂ ರಿಝ್ವಾನ್ ಚೊಕ್ಕಬೆಟ್ಟು , ರಫೀಕ್ ಕೃಷ್ಣಾಪುರ,‌ ಜಲಿಲ್ ಕೃಷ್ಣಾಪುರ, ಸಫ್ವಾನ್ ಗುತ್ತು ಉಪಸ್ಥಿತರಿದ್ದರು.

ಎಸ್ಕೆಎಸ್ಸೆಸ್ಸೆಫ್ ವಲಯ ಕಾರ್ಯದರ್ಶಿ ತೈಹಿಬ್ ಫೈಝಿ ಬೊಳ್ಳೂರು ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ಚೊಕ್ಕಬೆಟ್ಟು ಎಸ್ಕೆಎಸ್ಸೆಸ್ಸೆಫ್  ಕಾರ್ಯನಿರ್ವಾಹಕ ಕಾರ್ಯದರ್ಶಿ ಹನೀಫ್ ಅದಂ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News