ಮೊಟ್ಟಮೊದಲ ಬಾರಿ ಸಾಂವಿಧಾನಿಕ ಪೀಠದ ಕಲಾಪಗಳನ್ನು ನೇರಪ್ರಸಾರ ಆರಂಭಿಸಿದ ಸುಪ್ರೀಂಕೋರ್ಟ್

Update: 2022-09-27 06:19 GMT
Photo:PTI

ಹೊಸದಿಲ್ಲಿ: ಮೊಟ್ಟಮೊದಲ ಬಾರಿಗೆ ಸುಪ್ರೀಂ ಕೋರ್ಟ್ (Supreme Court)ಮಂಗಳವಾರ ತನ್ನ ಸಾಂವಿಧಾನಿಕ ಪೀಠದ ಕಲಾಪಗಳನ್ನು ನೇರಪ್ರಸಾರ ಆರಂಭಿಸಿದೆ. ತನ್ನ ಐತಿಹಾಸಿಕ ಹೆಜ್ಜೆಯಲ್ಲಿ ಶಿವಸೇನೆಯ ಎರಡು ಬಣಗಳಿಗೆ ಸಂಬಂಧಿಸಿದ ವಿಚಾರಣೆಯನ್ನು ನಡೆಸಲಿದೆ.

ಸೆಪ್ಟೆಂಬರ್ 27, 2018 ರಂದು ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಸಾಂವಿಧಾನಿಕ ಪ್ರಾಮುಖ್ಯತೆಯ ವಿಷಯಗಳಲ್ಲಿ ಪ್ರಮುಖ ಪ್ರಕ್ರಿಯೆಗಳ ನೇರ ಪ್ರಸಾರ ಅಥವಾ ವೆಬ್‌ಕಾಸ್ಟ್ ಕುರಿತು ಮಹತ್ವದ ತೀರ್ಪು ನೀಡಿದ್ದರು, "ಸೂರ್ಯನ ಬೆಳಕು ಅತ್ಯುತ್ತಮ ಸೋಂಕುನಿವಾರಕ" ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News