ಉಡುಪಿ ಜಿಲ್ಲೆಯ ನಾಲ್ವರು ಪಿಎಫ್‌ಐ ಮುಖಂಡರ ಬಂಧನ

Update: 2022-09-27 14:52 GMT

ಉಡುಪಿ, ಸೆ.27: ಸಾರ್ವಜನಿಕರ ಶಾಂತಿ ಭಂಗ ಉಂಟು ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ನಾಲ್ವರು ಪಿಎಫ್‌ಐ ಮುಖಂಡರನ್ನು ಇಂದು ಬೆಳಗಿನ ಜಾವ ಉಡುಪಿಯ ವಿವಿಧ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಪಿಎಫ್‌ಐ ಮುಖಂಡರಾದ ಆದಿಉಡುಪಿಯ ಮುಹಮ್ಮದ್ ಅಶ್ರಫ್ ಬಾವಾ, ಇಲ್ಯಾಸ್ ಹೂಡೆ, ಆಶಿಕ್ ಕೋಟೇಶ್ವರ, ಗಂಗೊಳ್ಳಿಯ ರಜಬ್ ಎಂದು ಗುರುತಿಸಲಾಗಿದೆ.

ಉಡುಪಿ ನಗರ, ಗಂಗೊಳ್ಳಿ, ಕುಂದಾಪುರ, ಮಲ್ಪೆ ಠಾಣೆಯ ಪೊಲೀಸರು  ದಾಳಿ ನಡೆಸಿ ಈ ನಾಲ್ವರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರ ವಿರುದ್ಧ  ಕಲಂ 107, 157 ಕಾಯಿದೆಯಡಿ ಪ್ರಕರಣ ದಾಖಲಿಸಿ ಆಯಾ ತಾಲೂಕಿನ ತಹಶೀಲ್ದಾರ್ ಮುಂದೆ ಹಾಜರುಪಡಿಸಲಾಯಿತು. ಇವರಲ್ಲಿ ಅಶ್ರಫ್ ಹಾಗೂ ಇಲ್ಯಾಸ್‌ ರನ್ನು ಸೆ.29ರವರೆಗೆ ಮತ್ತು ಆಶಿಖ್ ಮತ್ತು ರಜಬ್‌ನನ್ನು ಅ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News