ಪಿಎಫ್ಐ ನಿಷೇಧದ ಬೆನ್ನಿಗೇ ಪೊಲೀಸರು ಎಸ್ಡಿಪಿಐ ಕಚೇರಿಯ ಬೀಗ ಮುರಿದು ದಾಳಿ‌ ಮಾಡಿದ್ದಾರೆ: ಎಸ್ಡಿಪಿಐ ಆರೋಪ

Update: 2022-09-28 17:03 GMT

ಸುರತ್ಕಲ್, ಸೆ. 28: ಪಿಎಫ್ಐ ನಿಷೇಧದ ಬೆನ್ನಿಗೇ ಪೊಲೀಸರು, ಎಸ್ಡಿಪಿಐ ಕಚೇರಿಗಳಿಗೆ ದಾಳಿ ಮುಂದುವರಿಸಿದ್ದು, ಮಂಗಳೂರಿನ ಎಸ್ಡಿಪಿಐ ಕಚೇರಿಯ ಬೀಗ ಮುರಿದು ದಾಳಿ‌ ಮಾಡಿದ್ದಾರೆ ಎಂದು ಎಸ್ಡಿಪಿಐ ಆರೋಪಿಸಿದೆ.

ಅಲ್ಲದೆ, ದ.ಕ. ಜಿಲ್ಲಾದ್ಯಂತ ಜನರಿಗೆ ಉಚಿತವಾಗಿ ಸೇವೆ ನೀಡುತ್ತಿರುವ ಎಸ್ಡಿಪಿಐ ಅಧೀನದಲ್ಲಿರುವ ಸುಮಾರು 15 ಮಾಹಿತಿ ಮತ್ತು ಸೇವಾ ಕೇಂದ್ರಗಳಿಗೂ ಪೊಲೀಸರು ಅಕ್ರಮವಾಗಿ ದಾಳಿ ಮಾಡಿದ್ದಾರೆ ಎಂದು ಅರೋಪಿಸಿದ್ದಾರೆ.

ದಾಳಿಯ ವೇಳೆ ಕೆಲವೆಡೆಯಲ್ಲಿ ಸೇವೆ ನೀಡುತ್ತಿದ್ದ ಕಂಪ್ಯೂಟರ್ ಗಳು ಹಾಗೂ ಸಂಬಂಧಿತ ಸಮಿತಿಯ ಪುಸ್ತಕಗಳು, ಉಚಿತ ಸೇವೆ ಪಡೆದ ಗ್ರಾಹಕರ ಮಾಹಿತಿ ಇದ್ದ ಪುಸ್ತಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಎಸ್ಡಿಪಿಐ ಮುಖಂಡರು ಮಾಹಿತಿ ನೀಡಿದ್ದಾರೆ.

ಪೊಲೀಸರ ಅಕ್ರಮ ದಾಳಿಯ ಕುರಿತು ಎಸ್ಡಿಪಿಐ ಗುರುವಾರ ದ.ಕ. ಜಿಲ್ಲಾಧಿಕಾರಿಯವರನ್ನು ಭೇಟಿಮಾಡಿ ದೂರು ನೀಡಲು ನಿರ್ಧರಿಸಿದ್ದು, ಎಸ್ಡಿಪಿಐ ಸಂಬಂಧಿತ ಎಲ್ಲಾ ಅಕ್ರಮ ದಾಳಿಗಳ ವಿರುದ್ಧ ಕಾನುನು ಹೋರಾಟ ಮಾಡಲು ಸಿದ್ಧತೆ ನಡೆಸಿದೆ ಎಂದು ಎಸ್ಡಿಪಿಐ ಮುಖಂಡರು ಮಾಹಿತಿ ನೀಡಿದ್ದಾರೆ.

"ದ.ಕ. ಜಿಲ್ಲಾ ಎಸ್ಡಿಪಿಐ ಕಚೇರಿಗೆ ಪೊಲೀಸರು ಯಾವುದೇ ಮಾಹಿತಿ ನೀಡದೆ ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭ  ಬೀಗ ಮುರಿದು ಕಚೇರಿಗೆ ಪ್ರವೇಶಿಸಿದ್ದಾರೆ. ಇದೇ ರೀತಿ ಕೆಲವೆಡೆ ಜನರಿಗೆ ಉಚಿತವಾಗಿ ಸೇವೆ ನೀಡುತ್ತಿದ್ದ ನಮ್ಮ ಮಾಹಿತಿ ಮತ್ತು ಸೇವಾ ಕೇಂದ್ರಗಳಿಗೂ ದಾಳಿ ಮಾಡಿ ಕಂಪ್ಯೂಟರ್ ಗಳನ್ನು ಕೊಂಡುಹೋಗಿದ್ದಾರೆ. ಯಾವುದೇ ಮಾಹಿತಿ ನೀಡದೇ ಅಕ್ರಮವಾಗಿ ಬೀಗ ಮುರಿದು ದಾಳಿ ಮಾಡುತ್ತಿರುವ ಕುರಿತು ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು. ಇವೆಲ್ಲದರ ಕುರಿತು ಎಸ್ಡಿಪಿಐ ಕಾನೂನು ಹೋರಾಟ ಮಾಡಲಿದೆ".

- ಅಬೂಬಕರ್ ಕುಳಾಯಿ, ಜಿಲ್ಲಾಧ್ಯಕ್ಷರು ಎಸ್ಡಿಪಿಐ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News