ದ‌.ಕ.ಜಿಲ್ಲೆ: ಪಿಎಫ್ಐ, ಸಿಎಫ್ಐ ಸಂಘಟನೆಯ‌ 12 ಕಚೇರಿಗೆ ಬೀಗ

Update: 2022-09-28 18:09 GMT

ಮಂಗಳೂರು, ಸೆ. 28: ಕೇಂದ್ರ ಸರಕಾರವು ಪಿಎಫ್ಐ ಮತ್ತಿತರ 8 ಸಂಘಟನೆಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ಸೂಚನೆಯಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 12 ಕಡೆಗಳಲ್ಲಿರುವ ನಿಷೇಧಿತ ಸಂಘಟನೆಯ ಕಚೇರಿಗಳಿಗೆ ಬುಧವಾರ ಪೊಲೀಸರು ಬೀಗ ಜಡಿದಿದ್ದಾರೆ‌.

ಪಣಂಬೂರು, ಸುರತ್ಕಲ್, ಬಜ್ಪೆ, ಉಳ್ಳಾಲ, ಕೊಣಾಜೆ, ಮಂಗಳೂರು ಗ್ರಾಮಾಂತರ, ಪಾಂಡೇಶ್ವರ, ಬಂದರ್ ಠಾಣೆ ವ್ಯಾಪ್ತಿಯ ಕಚೇರಿಗಳಿಗೆ ದಾಳಿ ಮಾಡಿ ದಾಖಲೆ ಪತ್ರಗಳು, ಕಂಪ್ಯೂಟರ್ ಸಹಿತ ಇತರ ಸೊತ್ತುಗಳನ್ನು ವಶಕ್ಕೆ ‌ಪಡೆದು ಬೀಗ ಜಡಿಯಲಾಗಿದೆ‌.

ನಗರದ ಕಸಬಾ ಬೆಂಗರೆ, ಚೊಕ್ಕಬೆಟ್ಟು, ಕಾಟಿಪಳ್ಳ ಎರಡನೆ ಬ್ಲಾಕ್, ಅಡ್ಡೂರ್, ಕಿನ್ನಿಪದವು, ಕೆ.ಸಿ‌.ರೋಡ್, ಇನೋಳಿ, ಮಲ್ಲೂರು, ಕುದ್ರೋಳಿಯ ಪಿಎಫ್ಐ ಮತ್ತು ಬಂದರ್‌‌ನ ಸಿಎಫ್ಐ ಹಾಗೂ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಇನ್ಫೋರ್ಮೇಶನ್ ಆ್ಯಂಡ್ ಎಂಪವರ್ಮೆಂಟ್ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News