ಸ್ಯಾನಿಟರಿ ಪ್ಯಾಡ್ ಜತೆಗೆ ಕಾಂಡೋಮ್ ಕೂಡಾ ಬೇಕೇ ? ಬಾಲಕಿಗೆ ಐಎಎಸ್ ಅಧಿಕಾರಿ ಪ್ರಶ್ನೆ!

Update: 2022-09-29 02:03 GMT
ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಬಾಮ್ರಾ (File photo)

ಪಾಟ್ನಾ: ಸರ್ಕಾರ ಬಡ ಶಾಲಾ ಬಾಲಕಿಯರಿಗೆ ಕಡಿಮೆ ದರದಲ್ಲಿ ಸ್ಯಾನಿಟರಿ ಪ್ಯಾಡ್ ಒದಗಿಸುತ್ತದೆಯೇ ಎಂದು ಪ್ರಶ್ನಿಸಿದ ಶಾಲಾ ಬಾಲಕಿಯೊಬ್ಬಳಿಗೆ, "ಇಂಥ ಬೇಡಿಕೆಗಳಿಗೆ ಕೊನೆ ಇಲ್ಲ; ಇವರು ಕಾಂಡೋಮ್ ಕೂಡಾ ಕೇಳಬಹುದು" ಎಂದು ಉತ್ತರಿಸುವ ಮೂಲಕ ಬಿಹಾರದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ವಿವಾದ ಹುಟ್ಟುಹಾಕಿದ್ದಾರೆ.

ಸಾರ್ವಜನಿಕವಾಗಿ ಶಾಲಾ ಬಾಲಕಿಯನ್ನು ಈ ರೀತಿ ಅಣಕಿಸಿದ ಅಧಿಕಾರಿಯ ವರ್ತನೆ ವಿವಾದಕ್ಕೆ ಕಾರಣವಾಗಿದೆ.

"ಶಕ್ತ ಬೇಟಿ ಸಮೃದ್ಧ ಬಿಹಾರ್" (ಸಬಲ ಪುತ್ರಿ, ಸಮೃದ್ಧ ಬಿಹಾರ) ಹೆಸರಿನ ಕಾರ್ಯಾಗಾರದಲ್ಲಿ "ಸರ್ಕಾರ ನಮಗೆ 20-30 ರೂಪಾಯಿ ದರದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ನೀಡಬಹುದೇ?" ಎಂದು ಶಾಲಾ ಬಾಲಕಿಯೊಬ್ಬಳು ಐಎಎಸ್ ಅಧಿಕಾರಿ ಹರ್ಜೋತ್ ಕೌರ್ ಬಾಮ್ರಾ ಅವರನ್ನು ಪ್ರಶ್ನಿಸಿದ್ದಳು.

"ನಾಳೆ ನೀನು ಜೀನ್ಸ್, ಬಳಿಕ ಒಳ್ಳೆಯ ಶೂ, ಅಂತಿಮವಾಗಿ ಕುಟುಂಬ ಯೋಜನೆ ವಿಚಾರಕ್ಕೆ ಬಂದರೆ ಸರ್ಕಾರ ಕಾಂಡೋಮ್‍ಗಳನ್ನು ಕೂಡಾ ನೀಡಬೇಕು ಎಂದು ಹೇಳಬಹುದು" ಎಂದು ಬಾಲಕಿಯನ್ನು ಹರ್ಜೋತ್ ಬಾಮ್ರಾ ಗದರಿದ್ದಾರೆ. ಈ ಘಟನೆ ಬಗ್ಗೆ ಸಮಾಜ ಕಲ್ಯಾಣ ಖಾತೆ ಸಚಿವ ಮದನ್ ಸಾಹ್ನಿ ಆಘಾತ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ timesofindia.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News