ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿಯಿಂದ ಮೀಲಾದ್ ಪ್ರಯುಕ್ತ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ

Update: 2022-09-29 06:50 GMT

ಬಿ.ಸಿ.ರೋಡ್, ಸೆ.29: ಬಂಟ್ವಾಳ ತಾಲೂಕು ಸಂಯುಕ್ತ ಜಮಾಅತ್ ಕಮಿಟಿಯ ವತಿಯಿಂದ ಮೀಲಾದುನ್ನಬಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯನ್ಜು ಏರ್ಪಡಿಸಲಾಗಿದೆ.

ಪ್ರವಾದಿ ಮುಹಮ್ಮದ್ ಪೈಗಂಬರ್ ( ಸ.) ರವರ ಬೋಧನೆಗಳು ಮತ್ತು ಆಧುನಿಕ ಬದುಕು' ಎಂಬ ವಿಚಾರದಲ್ಲಿ ಪ್ರಬಂಧ ಸ್ಪರ್ಧೆ ನಡೆಯಲಿದ್ದು, ಪ್ರಬಂಧವು ವಿಷಯಾಧಾರಿತವಾಗಿರಬೇಕು ಮತ್ತು ವಿದ್ಯಾರ್ಥಿಗಳು ಸ್ವತಃ ಕೈಬರಹದಲ್ಲಿ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲಿ ಬರೆದಿರಬೇಕು.

ಪ್ರಬಂಧವು A4 ಅಳತೆಯ ಕಾಗದದಲ್ಲಿ ಗರಿಷ್ಠ ಮೂರು ಪುಟಗಳನ್ನು ಮೀರದಂತಿರಬೇಕು. ಪ್ರಬಂಧವನ್ನು ಬರೆದಿರುವ ಯಾವುದೇ ಪುಟದಲ್ಲಿ ಸ್ಪರ್ಧಿಗಳು ತಮ್ಮ ಹೆಸರು, ಕಾಲೇಜಿನ‌ ಹೆಸರನ್ನು ಬರೆಯಬಾರದು. ಬದಲಾಗಿ ಪ್ರಬಂಧದ ಜೊತೆಯಲ್ಲಿ ಒಂದು ಪ್ರತ್ಯೇಕ ಹಾಳೆಯಲ್ಲಿ ಸ್ಪರ್ಧಿಯ ಹೆಸರು, ತರಗತಿ, ಕಾಲೇಜಿನ ಹೆಸರು, ವಿಳಾಸ ಹಾಗೂ ಸಂಪರ್ಕಕ್ಕಾಗಿ ದೂರವಾಣಿ ಸಂಖ್ಯೆಗಳನ್ನು ಬರೆದು ಆಯಾಯ ಕಾಲೇಜಿನ ಪ್ರಾಂಶುಪಾಲರು ಸಹಿ‌ ಮತ್ತು ಮುದ್ರೆಯೊಂದಿಗೆ ದೃಢೀಕರಿಸಬೇಕು. ಕಾಲೇಜಿನ ಮುಖ್ಯಸ್ಥರ ದೃಡೀಕರಣವಿಲ್ಲದ ಪ್ರಬಂಧಗಳನ್ನು ಪುರಸ್ಕರಿಸಲಾಗುವುದಿಲ್ಲ.

 ಬಿ.ಎ,‌ಬಿ.ಕಾಂ, ಬಿ.ಎಸ್ಸಿ, ಬಿಬಿಎ, ಬಿಬಿಎಂ, ಬಿಸಿಎ, ಎಲ್ ಎಲ್. ಬಿ, ಬಿ. ಫಾರ್ಮಾ, ಬಿ.ಇ, ಮೊದಲಾದ ಪದವಿ ತರಗತಿಗಳ( 2022-23 ) ಯಾವುದೇ ಸೆಮಿಸ್ಟರ್ ಗಳಲ್ಲಿ ಓದುತ್ತಿರುವ ಯಾವುದೇ ಸಮುದಾಯದ ಆಸಕ್ತ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಭಾಗವಹಿಸಬಹುದು.

ಸ್ಪರ್ಧೆಯು ಪ್ರಥಮ, ದ್ವಿತೀಯ ,ತೃತೀಯ ಮತ್ತು ಮೂರು ಪ್ರೋತ್ಸಾಹಕ ಬಹುಮಾನಗಳನ್ನು ಒಳಗೊಂಡಿದ್ದು ಅನುಕ್ರಮವಾಗಿ

ರೂ.5,000, 4,000, 3,000 ಮತ್ತು 2,000 ಗಳ ನಗದು ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿರುತ್ತದೆ.

ಪ್ರಬಂಧವು ಅಕ್ಟೋಬರ್ 10ರೊಳಗಾಗಿ ಅಂಚೆ ಮೂಲಕ  ಕೆ. ಅಬೂಬಕರ್, ವಕೀಲರು ಮತ್ತು ನೋಟರಿ,

ಮೇಗಿನಪೇಟೆ- ವಿಟ್ಲ, ಅಂಚೆ- ವಿಟ್ಲ, ಬಂಟ್ವಾಳ ತಾಲೂಕು- ದ. ಕ. ಪಿನ್ -574243. ಈ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ.

  ಹೆಚ್ಚಿನ ಮಾಹಿತಿಗಾಗಿ  9980860880, 9980098515, 9611545686 ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News