ಮಂಗಳೂರು: ಇಂಡಿಯಾನ ಆಸ್ಪತ್ರೆಯಲ್ಲಿ ʼಹೆಲ್ದಿ ಹಾರ್ಟ್ ಕ್ಲಬ್‍ʼಗೆ ಚಾಲನೆ

Update: 2022-09-29 13:31 GMT

ಮಂಗಳೂರು, ಸೆ. 29: ನಗರದ ಪಂಪ್‍ವೆಲ್ ಬಳಿ ಇರುವ ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್‍ಸ್ಟಿಟ್ಯೂಟ್ ಲಿ.ನಲ್ಲಿ ಹೆಲ್ದಿ ಹಾರ್ಟ್ ಕ್ಲಬ್‍ಗೆ ಆಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಚಾಲನೆ ನೀಡಲಾಯಿತು.

ಆಸ್ಪತೆಯ ಆಡಳಿತ ನಿರ್ದೇಶಕ, ಮುಖ್ಯ ಹೃದ್ರೋಗ ತಜ್ಞ ಡಾ.ಯೂಸುಫ್ ಕುಂಬ್ಳೆ ಮಾತನಾಡಿ, ಜಗತ್ತಿನಲ್ಲಿ ಹೃದ್ರೋಗದಿಂದ ಅತೀ ಹೆಚ್ಚು ಸಾವು ಸಂಭವಿಸುತ್ತಿವೆ. ಇದಕ್ಕೆ ಆಧುನಿಕ ಜೀವನ ಶೈಲಿ, ಆಹಾರ ವಿಹಾರ ಕಾರಣವಾಗುತ್ತಿದೆ ಎಂದರು. 

ಪ್ರತಿನಿತ್ಯವೂ ವಾಯು ವಿಹಾರ, ವ್ಯಾಯಾಮ, ಹೊರಗಿನ ಫಾಸ್ಟ್ ಫುಡ್‍ಗಳಿಗೆ ಬದಲು, ಮನೆಯ ಆಹಾರವನ್ನೇ ಸೇವಿಸಬೇಕು. ನಿತ್ಯ ತರಕಾರಿ, ಹಣ್ಣು ಹಂಪಲು, ಮೊಟ್ಟೆ, ಮೀನು ಸೇವನೆ ಜತೆಗೆ, ವಾರಕ್ಕೊಮ್ಮೆ ಮಾಂಸ ಸೇವನೆ ಮಾಡಬಹುದು. ಮಕ್ಕಳಿಗೆ ಸೈಕ್ಲಿಂಗ್, ಕ್ರೀಡೆಗಳಲ್ಲಿ ತೊಡಗಿಸಿ ರೂಢಿಸಿಕೊಳ್ಳಬೇಕು. ಆ ಮೂಲಕ ಆರೋಗ್ಯವಂತ ಭಾರತ ನಿರ್ಮಾಣ ಅಗತ್ಯ ಎಂದವರು ಹೇಳಿದರು.

40 ವರ್ಷ ಪ್ರಾಯದ ಬಳಿಕ ನಿರಂತರ ರಕ್ತದೊತ್ತಡ, ಮಧುಮೇಹ ಮತ್ತು ಕೊಲೆಸ್ಟ್ರಾಲ್ ತಪಾಸಣೆ ಮಾಡಿಕೊಳ್ಳಬೇಕು.  ಇಂಡಿಯಾನ ಆಸ್ಪತ್ರೆಯ ಹೆಲ್ದಿ ಹಾರ್ಟ್ ಕ್ಲಬ್ ಸೇರಿಕೊಂಡು ಹಲವು ಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಕೊಳ್ಳಬಹುದು. ಶಸ್ತ್ರಚಿಕಿತ್ಸೆಗಳಲ್ಲಿ ರಿಯಾಯಿತಿ ಕೂಡಾ ಇವೆ ಎಂದು ಡಾ.ಯೂಸುಫ್ ಕುಂಬಳೆ ಹೇಳಿದರು.

ಆಸ್ಪತ್ರೆಯ ಅಧ್ಯಕ್ಷ, ಮಕ್ಕಳ ತಜ್ಞ ಡಾ. ಆಲಿ ಕುಂಬ್ಳೆ, ಸಿಇಒ ವಿಜಯಚಂದ್ರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News