ಮುಡಿಪು ನವೋದಯ ವಿದ್ಯಾಲಯದಲ್ಲಿ ಗಾಂಧೀಜಿ ಪ್ರತಿಮೆ ಅನಾವರಣ

Update: 2022-09-29 17:23 GMT

ಕೊಣಾಜೆ: ಮಹಾತ್ಮ ಗಾಂಧೀಜಿಯವರ ಆದರ್ಶ ತತ್ವಗಳು, ಜೀವನ ಚರಿತ್ರೆ ನಮಗೆಲ್ಲರಿಗೂ ಮಾದರಿಯಾಗಿದೆ. ಎಳವೆಯಲ್ಲಿಯೇ ನಾವು ಗಾಂಧೀಜಿ ಅವರು ಹೇಳಿಕೊಟ್ಟ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಉತ್ತಮ ಪರಿಶ್ರಮದ ಮೂಲಕ ಮುನ್ನಡೆದರೆ ಯಶಸ್ವೀ ಜೀವನವನ್ನು ಕಂಡುಕೊಳ್ಳಲು ಖಂಡಿತಾ  ಸಾಧ್ಯವಿದೆ‌ ಎಂದು   ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಅವರು ಹೇಳಿದರು.

ಅವರು ಮುಡಿಪುವಿನ ಜವಹಾರ್  ನವೋದಯ ವಿದ್ಯಾಸಂಸ್ಥೆಯಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆ ಉದ್ಘಾಟನೆ ಹಾಗೂ ಸ್ಮಾರ್ಟ್ ಕಂಪ್ಯೂಟರ್ ಲ್ಯಾಬ್ ಮತ್ತು ಗಣಿತಶಾಸ್ತ್ರ ಉದ್ಯಾನವನದ ಉದ್ಘಾಟನೆಯನ್ನು  ಗುರುವಾರ ನೆರವೇರಿಸಿ ಅವರು ಮಾತನಾಡಿದರು.

ಇಂದಿನ ಆಧುನಿಕತೆಯಲ್ಲಿ ಕೆಲವರು ಸತ್ಯ, ಪ್ರಾಮಾಣಿಕತೆಯ ಬಗ್ಗೆ ಮಾತನಾಡಿದರೂ ಅವರು ಜೀವನದಲ್ಲಿ ಅದನ್ನು ಅಳವಡಿಸಿಕೊಳ್ಳುವುದಿಲ್ಲ. ಗಾಂಧೀಜಿಯವರ ಸತ್ಯ, ಪ್ರಾಮಾಣಿಕತೆ, ಅಹಿಂಸೆಯ‌ ತತ್ವಗಳು ನಮ್ಮ ಮೌಲ್ಯಯುತ ಜೀವನಕ್ಕೆ ದಾರಿದೀಪವಾಗಿದೆ. ಮುಡಿಪು ನವೋದಯ ಕ್ಯಾಂಪಸ್ ನಲ್ಲಿ ಗಾಂಧೀಜಿಯವರ ಬೃಹತ್‌ ಪ್ರತಿಮೆ ನಿರ್ಮಾಣ ಆಗಿರುವುದರಿಂದ ಇಲ್ಲಿಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಅವರ ಆದರ್ಶಗಳನ್ನು ನೆನಪು ‌ಮಾಡಿಕೊಂಡು ಅನುಸರಿಸಲು ಸಹಕಾರಿಯಾಗಿದೆ ಎಂದರು. 

ಕಾರ್ಯಕ್ರಮದಲ್ಲಿ ಇನ್ಫೋಸಿಸ್ ಫೌಂಡೇಶನ್ ನ ಮಂಗಳೂರು ಘಟಕದ ಉಪಾಧ್ಯಕ್ಷರಾದ  ವಾಸುದೇವ ಕಾಮತ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಯಾವುದೇ ಅವಕಾಶವನ್ನು ಸದ್ಭಳಕೆ ಮಾಡಿಕೊಂಡು ಮುನ್ನಡೆದರೆ ಜೀವನದಲ್ಲಿ ಯಶಸ್ವಿಗಳಿಸಲು ಸಾಧ್ಯವಿದೆ  ಎಂದರು.

ಮುಡಿಪು ನವೋದಯ ವಿದ್ಯಾಲಯದ ಪ್ರಾಂಶುಪಾಲರಾದ ರಾಜೇಶ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. 
ಉಪಪ್ರಾಂಶುಪಾಲರಾದ ರೇಖಾ ಅಶೋಕ್ ಸ್ವಾಗತಿಸಿದರು. ಶಿಕ್ಷಕರಾದ ಮಹೇಶ್ ಅವರು ವಂದಿಸಿದರು. ಶಿಕ್ಷಕರಾದ ರಾಘವನ್ ಕೆ.ಪಿ.ಅವರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News