ಮಂಗಳೂರು: ದಾರುಸ್ವುಫ್ಫಾಹ್ ಸೆಂಟರ್ ಆಫ್ ಎಕ್ಸಲೆನ್ಸ್ ಶುಭಾರಂಭ

Update: 2022-09-30 16:15 GMT

ಮಂಗಳೂರು: ಪ್ರತಿಯೊಬ್ಬರೂ ಧಾರ್ಮಿಕ ವಿದ್ಯಾಭ್ಯಾಸ ಪಡೆಯುವುದು ಈ ಕಾಲಘಟ್ಟದ ಅಗತ್ಯ. ಧಾರ್ಮಿಕ ವಿದ್ಯಾಭ್ಯಾಸ ಪಡೆದ ಮಕ್ಕಳು ಎಲ್ಲರನ್ನು ಗೌರವಿಸುವ ಉತ್ತಮ ಗುಣನಡತೆಯುಳ್ಳವರಾಗುತ್ತಾರೆ. ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಧಾರ್ಮಿಕ ವಿದ್ಯಾಭ್ಯಾಸ ನೀಡುವಲ್ಲಿ ಶ್ರಮಿಸಬೇಕು ಎಂದು ಖಾಝಿ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಕರೆ ನೀಡಿದ್ದಾರೆ.

ಅವರು ನಗರದ ಜಪ್ಪುವಿನಲ್ಲಿರುವ ಎಚ್ ಎಚ್ ಡೈಮಂಡ್ ಸಿಟಿಯಲ್ಲಿ ಶುಕ್ರವಾರ ಸಂಜೆ ಅತ್ಯಾಧುನಿಕ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಕೇಂದ್ರ ದಾರುಸ್ವುಫ್ಫಾಹ್ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 

ಮಿಸ್ಬಾ ವುಮೆನ್ಸ್ ಕಾಲೇಜಿನ ಅಧ್ಯಕ್ಷ ಮುಮ್ತಾಝ್ ಅಲಿ ಶುಭ ಹಾರೈಸಿದರು.

ಈ ಕಾರ್ಯಕ್ರಮದಲ್ಲಿ ಪಿ. ಮುಹಮ್ಮದ್ ಮದನಿ ಬೋಳಿಯಾರ್, ಶಾಕಿರ್ ಹಾಜಿ ಕಣ್ಣೂರು, ಡೆಲ್ಟಾ ಇನ್ಫ್ರಾಲಾಜಿಸ್ಟಿಕ್ಸ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಅಹ್ಮದ್   ಮೊಯ್ದಿನ್, ಸಫ್ವಾನ್, ಎಚ್.ಎಚ್,  ಕುಂಞಿ ಅಹ್ಮದ್ ಹಾಜಿ, ರಹೀಂ ಸುಲ್ತಾನ್ ಗೋಲ್ಡ್, ಅಸ್ವುಫ್ಫಾಹ್ ಫೌಂಡೇಶನ್ ಕಾರ್ಯದರ್ಶಿ ಅಡ್ವಕೇಟ್ ಅಮೀರ್ ಅಫೀಫ್ ಉಪಸ್ಥಿತರಿದ್ದರು.

ಅಸ್ವುಫ್ಫಾಹ್ ಫೌಂಡೇಶನ್ ಉಪಾಧ್ಯಕ್ಷ ಮುಹಮ್ಮದ್ ಅಮೀನ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ದಾರು ಸ್ವುಫ್ಫಾಹ್ ವಿದ್ಯಾರ್ಥಿ ಮುಬಶ್ಶಿರ್ ಹುಸೇನ್ ಕಿರಾಅತ್ ಪಠಿಸಿದರು. ಹಾಶಿರ್ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು. ಅಸ್ವುಫ್ಫಾಹ್ ಫೌಂಡೇಶನ್ ಅಧ್ಯಕ್ಷ  ರಶೀದ್ ಸಅದಿ ವಂದಿಸಿದರು.

ದಾರುಸ್ವುಫ್ಫಾಹ್ ನಲ್ಲಿ ಒಂದರಿಂದ 7 ನೇ ತರಗತಿವರೆಗೆ ಇಂಗ್ಲೀಷ್ ಮಾಧ್ಯಮ ಮದ್ರಸಾ (ನರ್ಚರ್), ಮಹಿಳೆಯರಿಗೆ 3 ವರ್ಷಗಳ ಶರೀಯತ್ ಕೋರ್ಸ್ (ಸ್ಪಾರ್ಕ್ಲ್ ), ಹೆಣ್ಣು ಮಕ್ಕಳಿಗೆ 2 ವರ್ಷದ ಡಿಪ್ಲೋಮಾ ( ಬ್ಲೂಮ್ ), ಗಂಡು ಮಕ್ಕಳಿಗೆ 2 ವರ್ಷದ ಡಿಪ್ಲೋಮಾ ( ತ್ರೈವ್ ), ಮಕ್ಕಳಿಗೆ ದಿನನಿತ್ಯ ಕ್ಲಾಸುಗಳು (ನೇವಿಗೇಟ್), ಮಹಿಳೆಯರಿಗೆ ವಾರದ ಕ್ಲಾಸುಗಳು ಹಾಗು ಇತರ ಇಸ್ಲಾಮಿಕ್ ತರಗತಿಗಳು, ಸಭೆಗಳು ನಡೆಯಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಸೀರತ್ ಪ್ರಯುಕ್ತ ಸೆಪ್ಟೆಂಬರ್ 27 ರಿಂದ ಅಕ್ಟೊಬರ್ 25 ರ ತನಕ ದಾರುಸ್ವುಫ್ಫಾಹ್ ನಲ್ಲಿ ಒಂದು ತಿಂಗಳ ವಿವಿಧ ಧಾರ್ಮಿಕ, ಕಲಾ ಹಾಗು ಸಾಹಿತ್ಯ ಕಾರ್ಯಕ್ರಮಗಳು ನಡೆಯಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News