ಮಂಗಳೂರು: ಅಕ್ರಮ ಚಿನ್ನ ಸಾಗಾಟ; 86.09 ಲಕ್ಷ ರೂ. ಮೌಲ್ಯದ ಚಿನ್ನ ವಶ

Update: 2022-09-30 18:14 GMT
ಸಾಂದರ್ಭಿಕ ಚಿತ್ರ

ಬಜ್ಪೆ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಿವಿಧೆಡೆಯ ಐವರು ಪ್ರಯಾಣಿಕರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 86.09 ಲಕ್ಷ ರೂ. ಮೌಲ್ಯದ 1703ಗ್ರಾಂ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಸೆ.25ರಿಂದ ಸೆ.30ರ ವರೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ಸಾಗಾಟ ಮಾಡಲೆತ್ನಿಸಿದ ಕಾಸರಗೋಡು, ಭಟ್ಕಳ ಮತ್ತು ತ್ರಿವೇಂದ್ರಂ ಮೂಲದ ಐವರನ್ನು ಅಧಿಕಾರಿಗಳು ವಶಕ್ಕೆ ಪಡೆಸಿದ್ದಾರೆ.

ದುಬೈ ಮತ್ತು ಮಸ್ಕತ್‌ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರು, ಮಿಕ್ಸರ್ ಗ್ರೈಂಡರ್‌ನ ಮೋಟಾರಿನ ಒಳಭಾಗದಲ್ಲಿ, ಗುದನಾಳದಲ್ಲಿ ಮತ್ತು ಬಣ್ಣ ಲೇಪಿತ ಸುರುಳಿಯ ರೂಪದಲ್ಲಿ, ಒಳಉಡುಪುಗಳ ಒಳಗೆ ಗಮ್‌ನೊಂದಿಗೆ ಬೆರೆಸಿದ ಪೇಸ್ಟ್/ಪೌಡರ್ ರೂಪದಲ್ಲಿ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು ಎಂಸಿ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಐವರು ಆರೋಪಿಗಳನ್ನು ಬಂಧಿಸಿ 24 ಕ್ಯಾರೆಟ್ ನ 86.09 ಲಕ್ಷ ರೂ. ಮೌಲ್ಯದ 1,703 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದ್ದು, ಬಂಧಿತರ ವಿಚಾರಣೆ ನಡೆಯುತ್ತಿದೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ನಿಲ್ದಾಣದ ಕಸ್ಟಮ್ಸ್ ಆಧಿಕಾರಿಗಳು ಮಾಹಿತಿ‌ ನಿಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News