×
Ad

ಮಂಗಳೂರು: ಎಸ್ಕೆಎಸ್ಸೆಸ್ಸೆಫ್‌ ವತಿಯಿಂದ ಮಾದಕ ದ್ರವ್ಯ ವಿರುದ್ಧ ಜಾಗೃತಿ ಸಮಾವೇಶ, ರ‍್ಯಾಲಿ

Update: 2022-10-02 21:07 IST

ಮಂಗಳೂರು, ಅ.2: ವಿಖಾಯ ದಿನದ ಪ್ರಯುಕ್ತ ಎಸ್ಕೆಎಸ್ಸೆಸ್ಸೆಫ್‌ ವಿಖಾಯ ಜಿಲ್ಲಾ ವೆಸ್ಟ್ ಸಮಿತಿ ವತಿಯಿಂದ  ಅಂಬೇಡ್ಕರ್ ವೃತ್ತದಿಂದ ನಗರದ ಕ್ಲಾಕ್ ಟವರ್‌ ವರೆಗೆ ಮಾದಕ ದ್ರವ್ಯ ವಿರುದ್ಧ ಜನ ಜಾಗೃತಿ ಜಾಥಾ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಕೆಎಸ್ಸೆಸ್ಸೆಫ್‌ ವಿಖಾಯ  ಜಿಲ್ಲಾ ವೆಸ್ಟ್ ಸಮಿತಿ ಅಧ್ಯಕ್ಷರಾದ ಅಮೀರ್ ತಂಙಳ್ ಕಿನ್ಯ  ವಹಿಸಿದ್ದರು. ರ‍್ಯಾಲಿಯನ್ನು ಎಸ್ಕೆಎಸ್ಸೆಸ್ಸೆಫ್‌ ಬಂಟ್ವಾಳ ವಲಯ ಅಧ್ಯಕ್ಷರಾದ  ಇರ್ಷಾದ್ ದಾರಿಮಿ ಮಿತ್ತಬೈಲ್ ಉದ್ಘಾಟಿಸಿದರು. ಅಹ್ಮದ್ ನಹೀಂ ಪೈಝಿ ಮುಕ್ವೆ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದರು. 

ಎಸ್ಕೆಎಸ್ಸೆಸ್ಸೆಫ್‌ ವಿಖಾಯ  ಜಿಲ್ಲಾ ವೆಸ್ಟ್ ಸಮಿತಿ  ಪ್ರಧಾನ ಕಾರ್ಯದರ್ಶಿ  ಸಿದ್ದೀಕ್ ಅಬ್ದುಲ್ ಖಾದರ್,  ಬಂಟ್ವಾಳ ಎಸ್ಕೆಎಸ್ಸೆಸ್ಸೆಫ್‌ ಕೇಂದ್ರ ಸಮಿತಿ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ತಿಂಗಳಾಡಿ, ಎಸ್ಕೆಎಸ್ಸೆಸ್ಸೆಫ್‌ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ರಹ್ಮಾನಿ, ಎಸ್ಕೆಎಸ್ಸೆಸ್ಸೆಫ್‌ ದೇರಳಕಟ್ಟೆ ವಲಯ ಅಧ್ಯಕ್ಷರಾದ ಫಾರೂಕ್ ದಾರಿಮಿ ಕೈಕಂಬ ವಲಯ ಪ್ರಧಾನ ಕಾರ್ಯದರ್ಶಿ ಆರೀಫ್ ಬಡಕಬೈಲ್ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ  ಜಿಲ್ಲಾ ಕೋಶಾಧಿಕಾರಿ ಹಾರಿಸ್ ಕುದ್ರೋಳಿ , ಜಿಲ್ಲಾ ವರ್ಕಿಂಗ್  ಕಾರ್ಯದರ್ಶಿ ಬದ್ರದ್ದೀನ್ ಕುಕ್ಕಾಜೆ , ಮಂಗಳೂರು ವಲಯ ಅಧ್ಯಕ್ಷರಾದ ಅಬ್ದುಲ್ ಖಾದರ್ ಕಣ್ಣೂರು, ಶರೀಫ್ ಮೂಸ  ಕುದ್ದುಪದವು, ಹಂಝ ಕುಕ್ಕಾಜೆ, ಇಮ್ತಿಯಾಝ್ ಇಡ್ಯಾ, ನಝೀರ್ ವಳಚ್ಚಿಲ್ , ನೌಶಾದ್ ಮಲಾರ್, ಶಮೀರ್  ಎಚ್.ಕಲ್ಲು ಮೊದಲಾದವರು ಭಾಗವಹಿಸಿದ್ದರು.

ವಿಖಾಯ  ಜಿಲ್ಲಾ ವೆಸ್ಟ್ ಸಮಿತಿ ಜನರಲ್ ಕನ್ವೀನರ್ ಫಾರೂಕ್ ಮೂಡಬಿದ್ರೆ ಸ್ವಾಗತಿಸಿ, ಮುಸ್ತಫ ಕಟ್ಟಡಪಡ್ಪು ವಂದಿಸಿದರು.  ಕಲಂದರ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News