ಶಿವಸೇನೆಯ 3 ಸಾವಿರ ಸದಸ್ಯರು ಏಕನಾಥ ಶಿಂದೆ ಬಣಕ್ಕೆ ಸೇರ್ಪಡೆ

Update: 2022-10-02 18:30 GMT
photo: PTI

ಮುಂಬೈ: ಮುಂಬೈ ವರ್ಲಿ ಪ್ರದೇಶದ ಶಿವಸೇನೆಯ ಸುಮಾರು 3,000 ಸದಸ್ಯರು ರವಿವಾರ ಏಕನಾಥ್ ಶಿಂದೆ ಬಣ ಸೇರಿದ್ದು, ಇದು ಉದ್ಧವ್ ಠಾಕ್ರೆಗೆ ಅತಿ ದೊಡ್ಡ ಹೊಡೆತ ನೀಡಿದೆ.

ದಸರಾ ರ್ಯಾಲಿ ನಡೆಸಲು ಠಾಕ್ರೆ ಬಣಕ್ಕೆ ಬಾಂಬೆ ಉಚ್ಚ ನ್ಯಾಯಾಲಯ ಇತ್ತೀಚೆಗೆ ಅನುಮತಿ ನೀಡಿದ ಬಳಿಕ ಈ ಬೆಳವಣಿಗೆ ನಡೆದಿದೆ. 

ಮುಂಬೈಯ ವರ್ಲಿ ಪ್ರದೇಶದ ಶಾಸಕ ಆದಿತ್ಯ ಠಾಕ್ರೆ ಆಗಿರುವುದರಿಂದ ಶಿವಸೇನೆಯ ಸದಸ್ಯರ ಈ ನಿರ್ಧಾರ ಠಾಕ್ರೆ ಬಣಕ್ಕೆ ಅತಿ ದೊಡ್ಡ ನಿರಾಶೆ  ಉಂಟು ಮಾಡಿದೆ.
ಮಹಾ ವಿಕಾಸ ಅಘಾಡಿ ಸರಕಾರವನ್ನು ವಿರೋಧಿಸಿ ಆಗಿನ ಶಿವಸೇನೆಯ ಶಾಸಕ ಏಕನಾಥ ಶಿಂದೆ ಹಾಗೂ ಇತರ 39 ಬಂಡಾಯ ಶಾಸಕರು ಸೂರತ್‌ಗೆ ತರಳಿದ ಬಳಿಕ ಜೂನ್‌ನಲ್ಲಿ ಮಹಾರಾಷ್ಟ್ರ ಸರಕಾರ ವಿಭಜನೆಗೊಂಡಿತ್ತು. ಎನ್‌ಸಿಪಿ ಹಾಗೂ ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಏಕನಾಥ ಶಿಂದೆಯ ಬಣ ವಿರೋಧಿಸಿತ್ತು.

ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಉದ್ಭವಿಸಿದ ದಿನಗಳ ಬಳಿಕ ಉದ್ಧವ್ ಠಾಕ್ರೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅನಂತರ ಏಕನಾಥ ಶಿಂಧೆ ಮುಖ್ಯಮಂತ್ರಿ ಹಾಗೂ ದೇವೇಂದ್ರ ಫಡ್ನವಿಸ್ ಅವರ ಉಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News