ಪಿ.ಎ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ದಿನ ಕಾರ್ಯಕ್ರಮ

Update: 2022-10-04 12:38 GMT

ಮಂಗಳೂರು: ಪಿ.ಎ ಪ್ರಥಮ ದರ್ಜೆ ಕಾಲೇಜು, ನಡುಪದವು ಇದರ ಪದವಿ ದಿನ ಕಾರ್ಯಕ್ರಮವು  ಪಿ.ಎ ಸಭಾಂಗಣದಲ್ಲಿ ನೆರವೇರಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸುಯೋಗ್ ಶೆಟ್ಟಿ (ಸಿ.ಇ.ಒ) ನೀವ್ಯಸ್ ಸೊಲ್ಯೋಶನ್ಸ್ ಮಂಗಳೂರು, ಮಾತನಾಡಿ, ಜೀವನದಲ್ಲಿ ಸರಿಯಾದ ಧೃಡತೆ ಮುಖ್ಯ, ಅದು ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲು ಸಹಕಾರಿ ಎಂದರು.

ಪಿ.ಎ. ಇ.ಟಿ ಯ ಟ್ರಸ್ಟಿ ಪಿ.ಎ ಝುಬೈರ್ ಇಬ್ರಾಹಿಂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಇದು ಶೈಕ್ಷಣಿಕ ಮುಕ್ತಾಯ ಮತ್ತು ಬದುಕಿನ ಆರಂಭ, ನಾಲ್ಕು ಗೋಡೆಯ ನಡುವೆ ಕಲಿತಿದ್ದನ್ನು ಜೀವನಕ್ಕೆ ಅಳವಡಿಸುತ್ತಾ ದೇವರ ಮೇಲೆಯ ಧೃಡ ವಿಶ್ವಾಸ, ಸಮಾಜದ ಸರಿ ತಪ್ಪುಗಳನ್ನು ಅರಿಯುವ ಮೂಲಕ ಸಮಾಜದ ಏಳಿಗೆಗೆ ಕಾರಣೀಭೂತರಾಗಬೇಕೆಂದರು.

ಪಿ.ಎ.ಇ.ಟಿ ಯ ವ್ಯವಸ್ಥಾಪಕ ಟ್ರಸ್ಟೀ ಅಬ್ದುಲ್ಲಾ ಇಬ್ರಾಹೀಂ ಅಧ್ಯಕ್ಷೀಯ ನುಡಿಗಳನ್ನಾಡಿ ವಿದ್ಯಾರ್ಥಿಗಳಿಗೆ ಮತ್ತು ಅವರನ್ನು ರೂಪಿಸಿದ ಶಿಕ್ಷಕರಿಗೆ ಅಭಿನಂದಿಸಿದರು.

ಟ್ರಸ್ಟಿಗಳಾದ ಅಬ್ದುಲ್ ಲತೀಫ್, ಮೊಹಮ್ಮದ್ ಶಾಫಿ, ಮುಹಮ್ಮದ್ ಅಮೀನ್ ಇಬ್ರಾಹಿಂ, ಮೊಹಮ್ಮದ್ ಸಲ್ಮಾನ್ ಇಬ್ರಾಹಿಂ, ಬಿಲಾಲ್ ಇಬ್ರಾಹಿಂ, ಆದಿಲ್ ಇಬ್ರಾಹಿಂ, ಅಹ್ಮದ್ ಕುಟ್ಟಿ, ಪಿ.ಎ ಕಾಲೇಜಿನ ಡೀನ್ ಡಾ.ಸಯ್ಯಿದ್ ಅಮೀನ್ ಅಹಮದ್, ಮಾನವಿಕ ವಿಭಾಗದ ಮುಖ್ಯಸ್ಥರಾದ ನೂರ್ಜಹಾನ್, ಬಿ.ಸಿಎ ವಿಭಾಗದ ಮುಖ್ಯಸ್ಥರಾದ ಚೈತ್ರ ಬಿ.ಎಸ್, ಐ.ಕ್ಯೂ.ಎ.ಸಿ ಯ ಸಂಯೋಜಕರಾದ ವಾಣಿಶ್ರೀ ವೈ, ಪೇಸ್ ಕ್ಯಾಂಪಸ್ ನ ಎ.ಜಿ.ಎಂ ಶರಫುದ್ದೀನ್ ಪಿ.ಕೆ, ವೇದಿಕೆಯಲ್ಲಿ ಉಪ್ಥಿತರಿದ್ದರು.

ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ದೀಪ್ತಿ ಉದ್ಯಾವರ ಸ್ವಾಗತಿಸಿದರು. ಪಿ.ಎ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸರ್ಫ್ರಾಝ್ ಜಿ ಹಾಸಿಂ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಓದಿ ಹೇಳಿದರು.

ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡೆಲ್ಸಿ ಆರ್ ಡಿಸೋಜ ವಂದಿಸಿದರು. ವಿದ್ಯಾರ್ಥಿ ಇಶಾನ್ ಶೈಕ್ ಪ್ರಾರ್ಥಿಸಿದರೆ, ಪ್ರೊ. ಮುನೀರ ಎ ಮತ್ತು ಪ್ರೊ.ರಶೀದ ಬಾನು ಕಾರ್ಯಕ್ರಮವನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News