×
Ad

ಮಂಗಳೂರು: ಫ್ಲ್ಯಾಟ್ ನೀಡದೆ ವಂಚನೆ ಆರೋಪ; ಸೆನ್ ಠಾಣೆಯಲ್ಲಿ ಪ್ರಕರಣ ದಾಖಲು

Update: 2022-10-05 18:04 IST

ಮಂಗಳೂರು, ಅ.5: ಹಣವನ್ನು ಪಡೆದು ಬಳಿಕ ಫ್ಲ್ಯಾಟ್ ನೀಡದೆ ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿವೆ.

2016ರ ಜೂ.22ರಂದು ನಗರದಲ್ಲಿರುವ ಫ್ರಾವಿಡೆಂಟ್ ಬಿಲ್ಡರ್ಸ್‌ ಆ್ಯಂಡ್ ಡೆವಲಪರ್ಸ್‌ ಸಂಸ್ಥೆಯ ಪಾಲುದಾರರಾದ ಜಾನ್ ಸಿಲ್ವೆಸ್ಟರ್ ಸಲ್ದಾನ ಮತ್ತು ಜೀನ್ ರೂಪಾ ಸಲ್ದಾನರೊಂದಿಗೆ ಹೊಸ ವಸತಿ ಸಮುಚ್ಛಯದ 2ನೇ ಫ್ಲೋರ್‌ನಲ್ಲಿರುವ ಫ್ಲ್ಯಾಟ್ ಖರೀದಿ ಬಗ್ಗೆ 33 ಲ.ರೂ.ಗಳಿಗೆ ಕರಾರುಪತ್ರ ಮಾಡಿಕೊಂಡು 15.28 ಲ.ರೂ. ಮುಂಗಡ ಹಾಗೂ ಬಳಿಕ ಹಂತ ಹಂತವಾಗಿ ಪೂರ್ತಿ ಹಣ ನೀಡಿದ್ದೆ. ಕಟ್ಟಡ ನಿರ್ಮಾಣದ ಜಾಗ ಅನಿಲ್ ವೇಗಸ್ ಮತ್ತು ಮಾವೀಸ್ ಜೆ.ವೇಗಸ್ ಅವರಿಗೆ ಸೇರಿದ್ದು, ಅನಂತರ ದಿನಗಳಲ್ಲಿ ತನಗೆ ನೀಡಬೇಕಾದ ಫ್ಲ್ಯಾಟ್‌ನ್ನು ಆರೋಪಿಗಳು ಭಾರತ್ ಕೋ-ಆಪರೇಟಿವ್ ಬ್ಯಾಂಕ್‌ಗೆ 2 ಕೋ.ರೂ. ಅಡಮಾನ ಇರಿಸಿ ಮೋಸ ಮಾಡಿದ್ದಾರೆ. ಫ್ಲ್ಯಾಟ್ ಬಗ್ಗೆ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಸುಳ್ಯದ ಅಬ್ದುಲ್ ರಹೀಮ್ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಈ ಆರೋಪಿಗಳು  35 ಲ.ರೂ.ಗಳನ್ನು ಪಡೆದು ಫ್ಲ್ಯಾಟ್ ನೀಡದೆ ಅದನ್ನು 2 ಕೋ.ರೂ.ಗಳಿಗೆ ಅಡಮಾನ ಇರಿಸಿ ವಂಚಿಸಿದ್ದಾರೆ. ಫ್ಲ್ಯಾಟ್ ವಿಚಾರ ಕೇಳಿದಾಗ ಅವಾಚ್ಯ ಶಬ್ಧಗಳಿಂದ ಬೈದು ಜೀವಬೆದರಿಕೆ ಹಾಕಿದ್ದಾರೆ ಎಂದು ಪಣಕಜೆಯ ಆ್ಯಂಟನಿ ಡಿಸೋಜ ನ್ಯಾಯಾಲಯಯಕ್ಕೆ ಖಾಸಗಿ ದೂರು ನೀಡಿದ್ದಾರೆ.

ಅದರಂತೆ ಸೈಬರ್, ಎಕನಾಮಿಕ್ ಆ್ಯಂಡ್ ನಾರ್ಕೊಟಿಕ್ (ಸೆನ್) ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News