​ಥಾಯ್ಲೆಂಡ್‌ ನ ಡೇ ಕೇರ್ ಸೆಂಟರ್ ನಲ್ಲಿ ಗುಂಡಿನ ದಾಳಿ: 22 ಮಕ್ಕಳ ಸಹಿತ ಕನಿಷ್ಠ 34 ಮಂದಿ ಮೃತ್ಯು

Update: 2022-10-06 08:49 GMT
ಸಾಂದರ್ಭಿಕ ಚಿತ್ರ

ಬ್ಯಾಂಕಾಕ್: ಥಾಯ್ಲೆಂಡ್‌ನ ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುರುವಾರ ಮಾಜಿ ಪೊಲೀಸ್ ಅಧಿಕಾರಿಯೋರ್ವ ನಡೆಸಿದ ಗುಂಡಿನ ದಾಳಿಯಲ್ಲಿ ಮಕ್ಕಳ ಸಹಿತ 34 ಮಂದಿ ಮೃತಪಟ್ಟಿದ್ದು, ನಂತರ ಆರೋಪಿ ಸ್ವತಃ ಗುಂಡು ಹಾರಿಸಿಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಲಿಯಾದವರಲ್ಲಿ 22 ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು ಶೂಟರ್‌ ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದರು ಮತ್ತು ಆರೋಪಿಯನ್ನು ಬಂಧಿಸಲು ಪ್ರಧಾನಿ ಎಲ್ಲಾ ಏಜೆನ್ಸಿಗಳಿಗೆ ಆದೇಶ ನೀಡಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News