ಮಲ್ಪೆ: ಸುರಕ್ಷತಾ ಕ್ರಮಗಳೊಂದಿಗೆ ಸೈಂಟ್ ಮೇರಿಸ್ ಪ್ರವೇಶ ಪುನಾರಂಭ

Update: 2022-10-06 14:42 GMT

ಉಡುಪಿ, ಅ.6: ಮಳೆಗಾಲದ ನಂತರ ಸ್ಥಗಿತಗೊಂಡಿದ್ದ ಮಲ್ಪೆ ಸೈಂಟ್ ಮೇರಿಸ್ ದ್ವೀಪ ಪ್ರವೇಶವನ್ನು ಉಡುಪಿ ಜಿಲ್ಲಾಡಳಿತ ಎಲ್ಲ ರೀತಿಯ ಸುರಕ್ಷತಾ ಕ್ರಮಗಳೊದಿಗೆ ಪುನಾರಂಭಿಸಿದೆ.

ಈ ದ್ವೀಪಗಳು ಕರ್ನಾಟಕ ರಾಜ್ಯದ ನಾಲ್ಕು ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದಾಗಿದ್ದು, 2001ರಲ್ಲಿ ಜಿಯೋಲಾಜಿಕಲ್ ಸರ್ವೆ ಆಫ್ ಇಂಡಿಯಾ ಘೋಷಿಸಿದ ಭಾರತದ 26 ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದಾಗಿದೆ. ಇದೀಗ ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಈ ದ್ವೀಪದಲ್ಲಿ ಕಳೆದ ವರ್ಷ ಹಲವು ದುರ್ಘಟಣೆ ಗಳಿಂದ ಸಾವುಗಳು ಸಂಭವಿಸಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ.

ಪುರುಷರ ಮತ್ತು ಹೆಂಗಸರು ಪ್ರತ್ಯೇಕ ಶೌಚಾಲಯ ಹಾಗೂ ಬದಲಾಯಿಸುವ ಕೋಣೆಗಳನ್ನು ನವೀಕರಿಸಲಾಗಿದೆ. 110 ಮೀಟರ್ ಅಗಲ ಮತ್ತು 100 ಮೀಟರ್ ಉದ್ದದೊಂದಿಗೆ ದ್ವೀಪದ ಈಶಾನ್ಯ ಭಾಗದಲ್ಲಿ ಈಜು ವಲಯದ ರಚಿಸಲಾಗಿದೆ. ವಿವಿಧ ಸ್ಥಳಗಳಲ್ಲಿ ನಾಲ್ಕು ವಾಚ್ ಟವರ್‌ಗಳನ್ನು ಸ್ಥಾಪಿಸ ಲಾಗಿದೆ. 5 ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದ್ದು, ಅಪಾಯಕಾರಿ ವಲಯದಲ್ಲಿ ಎಚ್ಚರಿಕೆ ಫಲಕ ಮತ್ತು ಧ್ವಜವನ್ನು ಇರಿಸಲಾಗಿದೆ.

ದ್ವೀಪದಲ್ಲಿ ಸೆಲ್ಫಿ ತೆಗೆಯಲು ಹೋಗಿ ಕಳೆದ ವರ್ಷ ಹಲವು ಮಂದಿ ಪ್ರಾಣ  ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಏಳು ಸೆಲ್ಫಿ ಪಾಯಿಂಟ್‌ಗಳನ್ನು ಸ್ಥಾಪಿಸಲು ಸ್ಥಳಗಳನ್ನು ಗುರುತಿಸಲಾಗಿದೆ. ಅದರಲ್ಲಿ ಮೂರು ಸೆಲ್ಪಿ ಪಾಯಿಂಟ್ ರಚಿಸ ಲಾಗಿದೆ. ದ್ವೀಪದಲ್ಲಿ ಪ್ಲಾಸ್ಟಿಕ್ ವಸ್ತುಗಳು, ಪ್ಲಾಸ್ಟಿಕ್ ನಲ್ಲಿ ಸುತ್ತಿದ ಆಹಾರ ಪದಾರ್ಥಗಳು, ಆಲ್ಕೋಹಾಲ್ ಮತ್ತು ದೂಮಪಾನವನ್ನು ನಿಷೇಧಿಸಲಾಗಿದೆ.  ಮಗುವಿನ ಆಹಾರ ಮತ್ತು ಹಿರಿಯ ಔಷಧವನ್ನು ಮಾತ್ರ ಕೊಂಡೊಯ್ಯಲು ಅನುಮತಿಸಲಾಗಿದೆ. ಉಕ್ಕಿನ ಪಾತ್ರೆ ಮತ್ತು ತಟ್ಟೆಗಳಲ್ಲಿ ಆಹಾರವನ್ನು ಸಾಗಿಸ ಬಹುದು.

ಇಲ್ಲಿ ಜಲಕ್ರೀಡೆ ಚಟುವಟಿಕೆಗಳಾದ ಜೆಟ್ಸ್ಕಿ, ಸ್ನಾರ್ಕ್ಲಿಂಗ್, ಕಯಾಕ್, ಕ್ಲಿಫ್ ಡೈವ್, ಸ್ಕೂಬಾ ಡೈವ್, ಪ್ಯಾರಾ ಸೈಲಿಂಗ್, ಬನಾನಾ ರೈಡ್, ಐಲ್ಯಾಂಡ್ ರೌಂಡಿಂಗ್, ಡಾಲ್ಫಿನ್ ಸೈಟ್, ಆಂಗ್ಲಿಂಗ್‌ಗಳಿವೆ. ಪ್ರವಾಸಿಗರ ರಕ್ಷಣೆಗಾಗಿ ದ್ವೀಪ ದಲ್ಲಿ 8 ಜೀವರಕ್ಷಕ ದಳದವರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News