ಕುಂಪಲದಲ್ಲಿ ಮೌಲಿದ್ ಮಜ್ಲಿಸ್
Update: 2022-10-11 22:43 IST
ಉಳ್ಳಾಲ: ನೂರುಲ್ ಇಸ್ಲಾಂ ಜುಮಾ ಮಸೀದ್ ಕುಂಪಲ ಇದರ ಆಶ್ರಯದಲ್ಲಿ ಮೌಲಿದ್ ಮಜ್ಲಿಸ್ ಇತ್ತೀಚೆಗೆ ನೂರುಲ್ ಇಸ್ಲಾಂ ಮಸೀದಿಯ ಖತೀಬ್ ಅಮೀನ್ ಉಸ್ತಾದ್ ನೇತೃತ್ವದಲ್ಲಿ ನಡೆಯಿತು.
ಹಾಜಿ ಇಕ್ಬಾಲ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ನೂರಾನಿ ಯತೀಮ್ ಖಾನ ಮದರಸ ಸದರ್ ಮುಅಲ್ಲಿಮ್ ಅಬ್ದುಲ್ ರಹ್ಮಾನ್ ಅಹಸನಿ ದುಆ ನಿರ್ವಹಿಸಿದರು. ಈ ಸಂದರ್ಭ ಹಾಜಿ ಮುಹಮ್ಮದ್ ಕುಂಪಲ, ಹಾಜಿ ನಝೀರ್ ಕುಂಪಲ, ಹಾಜಿ ಮುಸ್ತಫ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.
ಸಯ್ಯಿದ್ ಮದನಿ ಕೇಂದ್ರ ಜುಮಾ ಮಸ್ಜಿದ್ ಸದಸ್ಯ ಹಾಜಿ ಪಿ ಎಸ್ ಬಾವ ನೇತೃತ್ವದಲ್ಲಿ ತಬರುಕ್ ವಿತರಣೆ ನಡೆಯಿತು.